alex Certify ಸಾರ್ವಜನಿಕರೇ ಎಚ್ಚರ: ಕೋವಿಡ್ ಲಸಿಕೆ ಹೆಸರಲ್ಲಿ ವಂಚನೆ ಜಾಲ ಸಕ್ರಿಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕರೇ ಎಚ್ಚರ: ಕೋವಿಡ್ ಲಸಿಕೆ ಹೆಸರಲ್ಲಿ ವಂಚನೆ ಜಾಲ ಸಕ್ರಿಯ

ನವದೆಹಲಿ: ಕೋವಿಡ್ ಇಡೀ ಜಗತ್ತನ್ನು ತಲ್ಲಣಗೊಳಿಸಿದೆ. ರೋಗ ತಡೆ ವ್ಯಾಕ್ಸಿನ್ ಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಇದನ್ನೇ ಕೆಲ ಕ್ರಿಮಿನಲ್ ಗಳು ವಂಚನೆಗೆ ವಸ್ತುವಾಗಿಸಿಕೊಂಡಿರುವ ಸುಳಿವು ಸಿಕ್ಕಿದೆ.

ಭಾರತೀಯ ಗೃಹ ಮಂತ್ರಾಲಯ ಈ ನಿಟ್ಟಿನಲ್ಲಿ ಜನರಿಗೆ ಎಚ್ಚರಿಕೆ ನೀಡಿದೆ ಎಂದು ಸೈಬರ್ ಸುರಕ್ಷೆ ಹಾಗೂ ಜಾಗೃತಿ ಪೋರ್ಟಲ್ ‘ಸೈಬರ್ ದೋಸ್ತ್’ ಟ್ವಿಟರ್ ನಲ್ಲಿ ಈ ವಿಷಯವನ್ನು ಹಂಚಿಕೊಂಡಿದೆ.

ಕೋವಿಡ್ ಲಸಿಕೆಯನ್ನು ಮೊದಲು ಪಡೆಯಲು ಹಣ ನೀಡಿ ಹಾಗೂ ನೋಂದಣಿ ಮಾಡಿಕೊಳ್ಳಿ ಎಂದು‌ ಕ್ರಿಮಿನಲ್‌ಗಳು ಮೆಸೇಜ್‌, ಇ ಮೇಲ್ ಅಥವಾ ಫೋನ್ ಕಾಲ್ ಮಾಡಬಹುದು.‌ ಕ್ರಿಮಿನಲ್‌ ಗಳು ಒಟ್ಟಾಗಿ ವಂಚನೆ‌ ಮಾಡಲು ಸಿದ್ಧತೆ ನಡೆಸಿದ್ದಾರೆ. ಇದು ಅಂತಾರಾಷ್ಟ್ರೀಯ ಇಂಟರ್‌ಪೋಲ್ ವಿಷಯವೂ‌ ಆಗಬಹುದು ಎಂದು ಸಚಿವಾಲಯ ಎಚ್ಚರಿಕೆ‌ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...