alex Certify ಜಲಪಾತದಲ್ಲಿ ಮೂಡಿದ ತ್ರಿವರ್ಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಲಪಾತದಲ್ಲಿ ಮೂಡಿದ ತ್ರಿವರ್ಣ

ಸಾಮಾನ್ಯವಾಗಿ ಜಲಪಾತವೆಂದರೆ ಬೆಳ್ನೊರೆಯುಕ್ಕಿಸುತ್ತಾ ಧುಮ್ಮಿಕ್ಕುವ ನೀರಿನ ಚಿತ್ರವೇ ಮನದಲ್ಲಿ ಮೂಡುತ್ತದೆ. ಆದರೆ ಸ್ವಾತಂತ್ರ‍್ಯೋತ್ಸವದ ಹಿಗ್ಗಿನಲ್ಲಿದ್ದ ದೇಶವಾಸಿಗಳಿಗೆ ಇಲ್ಲೊಂದು ತ್ರಿವರ್ಣ ಜಲಪಾತದ ಚಿತ್ರವು ಮೈನವಿರೇಳಿಸುತ್ತಿದೆ.

ನಮ್ಮ ರಾಷ್ಟ್ರ ಧ್ವಜದಲ್ಲಿರುವ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳು ನೀರಿನಲ್ಲಿ ಮಿಶ್ರಗೊಂಡು ಧುಮ್ಮಿಕ್ಕುತ್ತಿರುವಂತೆ ಕಾಣುವ ಈ ವಿಡಿಯೋವನ್ನು ಕಂಡು ಎಲ್ಲರೂ ಬೆರಗಾಗಿದ್ದಾರೆ. ಈ ಬಣ್ಣಗಳ ಪಂಪ್‌ ಇರುವ ಪೈಪ್‌ ಒಂದನ್ನು ಬಳಸುವ ಮೂಲಕ ಜಲಪಾತದ ಮೂಲಕ ಈ ಚಿತ್ತಾರ ಮೂಡುವಂತೆ ಮಾಡಲಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ.

74ನೇ ಸ್ವಾತಂತ್ರ‍್ಯೋತ್ಸವಕ್ಕೂ ಮುನ್ನ ಕೆನಡಾದಿಂದ ಕಾಣಿಸುವಂತೆ ನಯಾಗರಾ ಜಲಪಾತವನ್ನು ಸಹ ತ್ರಿವರ್ಣದಲ್ಲಿ ಮಿನುಗುವಂತೆ ಮಾಡಲಾಗಿತ್ತು. ಆದರೆ, ಬೆಳಕಿನ ಚಿತ್ತಾರಕ್ಕೂ, ಹೀಗೆ ಬಣ್ಣಗಳ ಚಿತ್ತಾರಕ್ಕೂ ಸಾಕಷ್ಟು ವ್ಯತ್ಯಾಸವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...