alex Certify ಸಿಡಿಲಿನಿಂದ ಹೊತ್ತಿ ಉರಿದ ಖರ್ಜೂರದ ಮರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಡಿಲಿನಿಂದ ಹೊತ್ತಿ ಉರಿದ ಖರ್ಜೂರದ ಮರ…!

ಸಿಡಿಲೊಂದು ಬಡಿದ ಕಾರಣಕ್ಕೆ ಬಿಹಾರದ ದರ್ಭಂಗಾ ಜಿಲ್ಲೆಯಲ್ಲಿ ಖರ್ಜೂರದ ಮರವೊಂದಕ್ಕೆ ಬೆಂಕಿ ಹೊತ್ತಿಕೊಂಡಿದೆ. ಭಾರೀ ವೇಗದಲ್ಲಿ ಗಾಳಿ ಬೀಸುತ್ತಿರುವ ನಡುವೆಯೇ ಮರ ಹೊತ್ತಿ ಉರಿಯುತ್ತಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಯಾಸ್ ಚಂಡಮಾರುತದ ಕಾರಣ ಭಾರೀ ಬಿರುಗಾಳಿ ಹಾಗೂ ಮಳೆಯ ನಡುವೆ ಮರದ ನೆತ್ತಿ ಹೊತ್ತಿ ಉರಿಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಇದೇ ವೇಳೆ ಮರದ ಬಳಿ ಎಲೆಕ್ಟ್ರಿಕ್ ವೈರ್‌ಗಳು ನೇತಾಡುತ್ತಿರುವುದನ್ನು ಕಾಣಬಹುದಾಗಿದೆ.

ಅದೃಷ್ಟವಶಾತ್‌ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಸ್ಥಳದಲ್ಲಿ ಮಳೆಯಾಗುತ್ತಿದ್ದ ಕಾರಣ ಆ ಸಮಯ ಅಲ್ಲಿ ಯಾರೂ ಇರಲಿಲ್ಲ. ಚಂಡಮಾರುತದ ಕಾರಣ ಬಿಹಾರದ ಅನೇಕ ಜಾಗಗಳಲ್ಲಿ ಭಾರೀ ಮಳೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...