ಕಳೆದ ಎರಡು ವಾರಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೆಂಡ್ ಆಗುತ್ತಿರುವ ಆನೆ ಮರಿಗಳು ಒಂಥರಾ ಸೆಲೆಬ್ರಿಟಿಗಳಾಗಿಬಿಟ್ಟಿವೆ. ಆನೆ ಮರಿಗಳ ಚಿನ್ನಾಟದ ಒಂದೆರಡು ವಿಡಿಯೋಗಳು ವೈರಲ್ ಆದ ಬಳಿಕ ಇದೀಗ ಮತ್ತೊಂದು ಆನೆ ಮರಿಯ ವಿಡಿಯೋ ಸದ್ದು ಮಾಡುತ್ತಿದೆ.
ಕೆಲವೇ ದಿನಗಳ ತನ್ನ ಮರಿಗೆ ನಡೆಯಲು ಪ್ರೇರಣೆ ನೀಡುತ್ತಿರುವ ಆನೆಯೊಂದರ ವಿಡಿಯೋ ಇದು. ಪ್ರಕೃತಿಯಲ್ಲಿ ತಾಯ್ತನ ಎಂಬುದು ಅದೆಂಥ ಶ್ರೇಷ್ಠವಾದ ವರ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.
ಭಾರತೀಯ ಅರಣ್ಯ ಸೇವಾಧಿಕಾರಿ ಸುಶಾಂತ ನಂದಾ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.