alex Certify ಹೆತ್ತ ಮಗಳನ್ನೇ ಹತ್ಯೆ ಮಾಡಲು ಸುಪಾರಿ ನೀಡಿದ್ದ ಮಹಾತಾಯಿ.​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆತ್ತ ಮಗಳನ್ನೇ ಹತ್ಯೆ ಮಾಡಲು ಸುಪಾರಿ ನೀಡಿದ್ದ ಮಹಾತಾಯಿ.​..!

ಓಡಿಶಾದ ಬಾಲಸೋರ್​ ಜಿಲ್ಲೆಯಲ್ಲಿ ಮಗಳನ್ನೇ ಕೊಲೆ ಮಾಡಿದ ಆರೋಪದಡಿಯಲ್ಲಿ 58 ವರ್ಷದ ತಾಯಿಯನ್ನ ಬಂಧಿಸಲಾಗಿದೆ. ಮಗಳನ್ನ ಕೊಲೆ ಮಾಡೋಕೆ ಈಕೆ 50000 ರೂಪಾಯಿಗೆ ಪ್ರಮೋದ್​ ಜೆನಾ(32) ಸೇರಿದಂತೆ ಇನ್ನಿಬ್ಬರನ್ನ ನೇಮಿಸಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಪ್ರಕರಣ ಸಂಬಂಧ ಪ್ರಮೋದ್​ ಜೆನಾನನ್ನೂ ಬಂಧಿಸಲಾಗಿದೆ ಎಂದು ಬಾಲಸೋರ್​ ಸದರ್​ ಉಪವಿಭಾಗದ ಪೊಲೀಸ್​ ಅಧಿಕಾರಿ ಪ್ರವಾಶ್​ ಪಾಲ್​ ಮಾಹಿತಿ ನೀಡಿದ್ರು.

ಕಿರಿಯ ಮಗಳು ಶಿವಾನಿ ನಾಯಕ್​ (36) ಅಕ್ರಮ ಮದ್ಯ ವ್ಯಾಪಾರದಲ್ಲಿ ಭಾಗಿಯಾದ್ದಳು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಇದೇ ವಿಚಾರವಾಗಿ ಇವರ ಕುಟುಂಬದಲ್ಲಿ ವೈಮನಸ್ಯ ಮೂಡಿತ್ತು ಎನ್ನಲಾಗಿದೆ.

ತನ್ನ ಮಗಳನ್ನ ಅಕ್ರಮ ಮದ್ಯ ವ್ಯಾಪಾರ ಮಾಡದಂತೆ ತಡೆಯಲು ಸುಕುರಿ ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾದ ಬಳಿಕ ಶಿವಾನಿಯನ್ನ ಕೊಲೆ ಮಾಡಿಸಲು ಸುಕುರಿ ಪ್ರಮೋದ್​​ನನ್ನ ಸಂಪರ್ಕಿಸಿದಳು. ಹಾಗೂ 50000 ರೂಪಾಯಿ ಸುಪಾರಿ ನೀಡಲು ಒಪ್ಪಿದಳು ಎನ್ನಲಾಗಿದೆ. ಕೊಲೆ ಮಾಡಲು ಮುಂಗಡವಾಗಿ 8 ಸಾವಿರ ರೂಪಾಯಿಯನ್ನೂ ನೀಡಿದ್ದಳು.

ಅದರಂತೆ ಶಿವಾನಿಯನ್ನ ಜನವರಿ 12ರಂದು ಕಲ್ಲು ಹಾಗೂ ಇತರೆ ಮಾರಕಾಸ್ತ್ರಗಳನ್ನ ಬಳಸಿ ಕೊಲೆ ಮಾಡಲಾಯ್ತು. ನಾಗ್ರಾಮ್​ ಗ್ರಾಮದ ಸೇತುವೆಯಲ್ಲಿ ಆಕೆಯ ಶವವನ್ನ ಪತ್ತೆ ಮಾಡಲಾಗಿದೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...