alex Certify ಮಹಿಳೆಯರ ಅವಿರತ ಪ್ರಯತ್ನದಿಂದ ʼಕೋವಿಡ್ʼ‌ ಮುಕ್ತವಾಗಿದೆ ಈ ಗ್ರಾಮ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರ ಅವಿರತ ಪ್ರಯತ್ನದಿಂದ ʼಕೋವಿಡ್ʼ‌ ಮುಕ್ತವಾಗಿದೆ ಈ ಗ್ರಾಮ..!

ಸಂಪೂರ್ಣ ದೇಶ ಕೊರೊನಾ ಎರಡನೇ ಅಲೆಯ ಭೀಕರತೆಗೆ ನಲುಗಿ ಹೋಗಿರುವ ಈ ಸಂದರ್ಭದಲ್ಲಿ ಮಧ್ಯಪ್ರದೇಶದ ಗ್ರಾಮವೊಂದು ಒಂದೇ ಒಂದು ಕೊರೊನಾ ಕೇಸ್​ಗಳನ್ನ ಹೊಂದದೆಯೇ ನಿರಾಳವಾಗಿದೆ.

ಅಂದಹಾಗೆ ಈ ಗ್ರಾಮ ಕೋವಿಡ್​ ಮುಕ್ತವಾಗಿ ಮಾರ್ಪಡುವ ಹಿಂದೆ ಇಲ್ಲಿನ ಮಹಿಳೆಯರ ಕೊಡುಗೆ ತುಂಬಾನೇ ಇದೆ. ಸಂಪೂರ್ಣ ಗ್ರಾಮಕ್ಕೆ ಸ್ವಯಂಘೋಷಿತ ಲಾಕ್​ಡೌನ್​ ಹೇರುವ ಮೂಲಕ ಹೊರಗಿನವರ ಗ್ರಾಮದ ಎಂಟ್ರಿಗೆ ನಿರ್ಬಂಧ ಹೇರಿದ್ದಾರೆ.

ಚಿಖಲಾರ್​ ಎಂಬ ಗ್ರಾಮ ಕಳ್ಳಭಟ್ಟಿ ಮಾರಾಟದ ಮೂಲಕ ಕುಖ್ಯಾತಿಯನ್ನ ಗಳಿಸಿತ್ತು. ಆದರೆ ಇದೀಗ ಮಹಿಳೆಯರ ಅವಿರತ ಪ್ರಯತ್ನದಿಂದಾಗಿ ಕೋವಿಡ್​ ಮುಕ್ತ ಗ್ರಾಮ ಎಂಬ ಕೀರ್ತಿ ಸಂಪಾದಿಸಿದೆ.

ಗ್ರಾಮದ ಸುತ್ತಲೂ ಬಿದಿರಿನ ಬ್ಯಾರಿಕೇಡ್​ ಹಾಕಿರುವ ಮಹಿಳೆಯರು ಗ್ರಾಮಕ್ಕೆ ಯಾರೂ ಎಂಟ್ರಿ ಕೊಡದಂತೆ ದೊಣ್ಣೆ ಹಿಡಿದು ಕಾಯುತ್ತಾರೆ. ಇದು ಮಾತ್ರವಲ್ಲದೇ ಗ್ರಾಮಕ್ಕೆ ಹತ್ತಿರ ಇರುವ ಹೆದ್ದಾರಿಯಲ್ಲಿ ಹಾದು ಹೋಗುವವರ ಮೇಲೂ ಕಣ್ಣಿಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...