alex Certify ಚೀನಾಗೆ ಸಡ್ಡುಹೊಡೆದ ಭಾರತೀಯ ಯೋಧರಿಂದ ಮತ್ತೊಂದು ಸಾಹಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೀನಾಗೆ ಸಡ್ಡುಹೊಡೆದ ಭಾರತೀಯ ಯೋಧರಿಂದ ಮತ್ತೊಂದು ಸಾಹಸ

ನವದೆಹಲಿ: ಪೂರ್ವ ಲಡಾಖ್ ಗಾಲ್ವನ್ ಕಣಿವೆಯಲ್ಲಿ ಭಾರತ – ಚೀನಾ ಯೋಧರ ನಡುವೆ ಹಿಂಸಾತ್ಮಕ ಸಂಘರ್ಷ ನಡೆದ ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಈ ನಡುವೆಯೇ ಭಾರತೀಯ ಯೋಧರು ಕೇವಲ 72 ಗಂಟೆಯಲ್ಲಿ ಗಾಲ್ವನ್ ಸೇತುವೆಯನ್ನು ಪೂರ್ಣಗೊಳಿಸಿದ್ದಾರೆ.

ಗಾಲ್ವನ್ ನದಿ ಸೇತುವೆ ಕಾಮಗಾರಿಯನ್ನು 72 ಗಂಟೆಯೊಳಗೆ ಪೂರ್ಣಗೊಳಿಸುವ ಮೂಲಕ ಭಾರತೀಯ ಸೇನೆ ಚೀನಾಗೆ ಸಡ್ಡು ಹೊಡೆದಿದೆ. ಈ ಸೇತುವೆ ನಿರ್ಮಾಣ ವಿಚಾರ ಕೂಡ ಸಂಘರ್ಷಕ್ಕೆ ಕಾರಣವಾಗಿದ್ದು, ಚೀನಾ ಸೇತುವೆ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಇದಕ್ಕೆ ಜಗ್ಗದ ಭಾರತೀಯ ಸೇನೆ 60 ಮೀಟರ್ ಉದ್ದದ ಸೇತುವೆ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಿದೆ. ಇದರಿಂದ ಭಾರತೀಯ ಸೇನಾ ವಾಹನ, ಸರಕುಗಳನ್ನು ಸುಲಭವಾಗಿ ಸಾಗಿಸಲು ಅನುಕೂಲವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...