alex Certify ಮೆಚ್ಚುಗೆಗೆ ಪಾತ್ರವಾಗಿದೆ ಕೊರೊನಾ ಸಂಕಷ್ಟದ ವೇಳೆ ಈ ಶಿಕ್ಷಕಿ ಮಾಡಿರುವ ಕಾರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಚ್ಚುಗೆಗೆ ಪಾತ್ರವಾಗಿದೆ ಕೊರೊನಾ ಸಂಕಷ್ಟದ ವೇಳೆ ಈ ಶಿಕ್ಷಕಿ ಮಾಡಿರುವ ಕಾರ್ಯ

ಕೊರೋನಾ ವೈರಸ್ ಕಾಟದಿಂದ ಜಗತ್ತಿನಾದ್ಯಂತ ಅನೇಕ ಕಡೆಗಳಲ್ಲಿ ಸಾಕಷ್ಟು ಮಂದಿ ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಅದರಲ್ಲೂ ಕೆಲಸ ಕಳೆದುಕೊಂಡವರ ಪೈಕಿ ಮಕ್ಕಳಿರುವ ಮಂದಿಯ ಪರದಾಟ ಹೇಳತೀರದು. ಇದೇ ವೇಳೆ, ವೇತನ ಕಡಿತದ ಪೆಟ್ಟು ತಿಂದ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ಕೊಡಲು ಬಹಳಷ್ಟು ಪ್ರಯಾಸ ಪಡುತ್ತಿದ್ದಾರೆ.

ಶಿರ್ಲೆ ಪಿಳ್ಳೈ ಹೆಸರಿನ ಇಂಥ ಒಬ್ಬ ಶಿಕ್ಷಕಿ, ಮುಂಬಯಿಯ ಪೊವಾಯ್‌ ಇಂಗ್ಲಿಷ್‌ ಹೈಸ್ಕೂಲ್‌ನಲ್ಲಿ ಪ್ರಿನ್ಸಿಪಾಲ್ ಆಗಿದ್ದಾರೆ. ಇವರು 200ರಷ್ಟು ವಿದ್ಯಾರ್ಥಿಗಳಿಗೆ ಶಿಕ್ಷಣದ ವೆಚ್ಚ ಭರಿಸಲೆಂದು ಜನರಿಂದ ದೇಣಿಗೆ ಸಂಗ್ರಹಿಸುವ ಕಾರ್ಯಕ್ಕೆ ಇಳಿದಿದ್ದು, ಕಳೆದ ಒಂದು ವರ್ಷದಿಂದ ಒಟ್ಟಾರೆ 40 ಲಕ್ಷ ರೂ.ಗಳನ್ನು ಸಂಗ್ರಹಿಸಿದ್ದಾರೆ.

BIG NEWS: ಟಿಕೆಟ್ ದರ ಶೇಕಡ 15 ರಷ್ಟು ಹೆಚ್ಚಳದೊಂದಿಗೆ ಸರ್ಕಾರದಿಂದ ಬಿಗ್ ಶಾಕ್, ವಿಮಾನಗಳಲ್ಲಿ ಪ್ರಯಾಣಿಕರ ಸಾಮರ್ಥ್ಯ ಸಂಖ್ಯೆ ಕಡಿತ

“35 ವರ್ಷಗಳ ನನ್ನ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಟೇಬಲ್ ಮೇಲೆ ರಿಪೋರ್ಟ್ ಕಾರ್ಡ್‌ಗಳು ರಾಶಿ ಬಿದ್ದಿದ್ದರೂ ಅದನ್ನು ತೆಗೆದುಕೊಳ್ಳಲು ಪೋಷಕರು ಬರದೇ ಇರುವುದನ್ನು ನೋಡುತ್ತಿದ್ದೇನೆ” ಎಂದು ಪಿಳ್ಳೈ ಮಾಧ್ಯಮಕ್ಕೆ ತಿಳಿಸಿದ್ದು “ನಮ್ಮಲ್ಲಿ ದಿನಗೂಲಿ ನೌಕರರು ಹಾಗೂ ಕೆಳ ಮಧ್ಯಮವರ್ಗದವರ ಮಕ್ಕಳು ಓದುತ್ತಿದ್ದಾರೆ. ಹೆಣ್ಣು ಮಕ್ಕಳು ಮೊದಲಿಗೆ ಶಾಲೆಯಿಂದ ಡ್ರಾಪ್‌ಔಟ್ ಆಗುವ ಸಾಧ್ಯತೆಗಳು ಹೆಚ್ಚಿರುವುದೇ ದೊಡ್ಡ ಚಿಂತೆಯಾಗಿದೆ” ಎಂದು ಹೇಳಿದ್ದಾರೆ.

ವಿರುದ್ದ ದಿಕ್ಕಿನಲ್ಲಿ ಓಡಿದ ದಂಪತಿ…! ಗೊಂದಲಕ್ಕೊಳಗಾದ ಶ್ವಾನ ಮಾಡಿದ್ದೇನು ಗೊತ್ತಾ….?

ಶಾಲೆಯು ಪ್ರತಿಯೊಂದು ವಿದ್ಯಾರ್ಥಿಯ ವಾರ್ಷಿಕ ಶುಲ್ಕದಲ್ಲಿ 25% ಕಡಿತ ಮಾಡುವ ಮೂಲಕ 35,000 ರೂ.ಗಳಿಗೆ ಇಳಿಸಿದ್ದು, ಶಿಕ್ಷಕರಿಗೂ ಸಹ ವೇತನದಲ್ಲಿ 30-50ರಷ್ಟು ಕಡಿತಗೊಳಿಸಿದೆ.

ಹೀಗಾದರೂ ಶಾಲೆ ನಡೆಸುವುದು ಕಷ್ಟವಾದ ಬಳಿಕ ಕಾರ್ಪೋರೇಟ್‌ಗಳಿಗೆ ಮನವಿ ಮಾಡಲು ಮುಂದಾದ ಪಿಳ್ಳೈ, ಅಲ್ಲಿಂದ ಆಚೆಗೆ ಸ್ಥಳೀಯ ಸಮುದಾಯದ ನೆರವಿನಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆಂದು ಹಣ ಸಂಗ್ರಹಿಸಲು ಆರಂಭಿಸಿ ವಿದ್ಯಾರ್ಥಿಗಳ ನೆರವಿಗೆ ನಿಂತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...