alex Certify ವಿರುದ್ದ ದಿಕ್ಕಿನಲ್ಲಿ ಓಡಿದ ದಂಪತಿ…! ಗೊಂದಲಕ್ಕೊಳಗಾದ ಶ್ವಾನ ಮಾಡಿದ್ದೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿರುದ್ದ ದಿಕ್ಕಿನಲ್ಲಿ ಓಡಿದ ದಂಪತಿ…! ಗೊಂದಲಕ್ಕೊಳಗಾದ ಶ್ವಾನ ಮಾಡಿದ್ದೇನು ಗೊತ್ತಾ….?

ಮನೆಲಿ ಒಂದು ಶ್ವಾನ ಸಾಕಿದ್ರೆ ಸಾಕು. ನಿಮಗೆ ಟೈಮ್ ಪಾಸ್​ ಹೇಗೆ ಆಗುತ್ತೆ ಅನ್ನೋದೇ ತಿಳಿಯೋದಿಲ್ಲ. ಈ ವಿಚಾರವಾಗಿ ನಿಮಗೆ ಇನ್ನೂ ಡೌಟ್​ ಇದೆ ಅಂದರೆ ಇತ್ತೀಚಿಗೆ ಟಿಕ್​ಟಾಕ್​ನಲ್ಲಿ ವೈರಲ್​ ಆಗಿರುವ ವಿಡಿಯೋವೊಂದು ನಿಮಗೆ ಉತ್ತಮ ಉದಾಹರಣೆ ಎನಿಸಬಹುದು. ಈ ವಿಡಿಯೋ ಎಷ್ಟರ ಮಟ್ಟಿಗೆ ವೈರಲ್ ಆಗಿದೆ ಅಂದರೆ ಸಾಮಾಜಿಕ ಜಾಲತಾಣದ ಇತರೆ ವೇದಿಕೆಗಳಲ್ಲೂ ಸದ್ದು ಮಾಡ್ತಿದೆ.

ಈ ವಿಡಿಯೋದಲ್ಲಿ ದಂಪತಿ ನಾಯಿಯನ್ನ ಒಂದು ಜಾಗದಲ್ಲಿ ಬಿಟ್ಟು ವಿರುದ್ಧ ದಿಕ್ಕಿನಲ್ಲಿ ಓಡುತ್ತಾರೆ. ಈಗ ಆ ನಾಯಿ ಯಾರ ಬಳಿ ಓಡಿ ಬರುತ್ತೆ ಅನ್ನೋದೇ ಈ ವಿಡಿಯೋದ ಮುಖ್ಯ ಪಾಯಿಂಟ್​ ಆಗಿತ್ತು. ಆದರೆ ಆಶ್ಚರ್ಯ ಎಂಬಂತೆ ಈ ಶ್ವಾನವು ಯಾರ ಬಳಿಯೂ ಹೋದೇ ವೃತ್ತಾಕಾರದಲ್ಲಿ ಸುತ್ತೋಕೆ ಆರಂಭಿಸಿದೆ.

ಟಿಕ್​ಟಾಕ್​ ಮಾತ್ರವಲ್ಲದೇ ಟ್ವಿಟರ್​ನಲ್ಲೂ ಈ ವಿಡಿಯೋವನ್ನ ಶೇರ್​ ಮಾಡಲಾಗಿದ್ದು 3.2 ಮಿಲಿಯನ್​ಗೂ ಅಧಿಕ ವೀವ್ಸ್ ಹಾಗೂ 266.6 ಸಾವಿರ ಲೈಕ್ಸ್​ ಸಂಪಾದಿಸಿದೆ.

— Queen ? (@jadastackhouse) May 23, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...