alex Certify ಎಚ್ಚರ…! ಭಾರತದಲ್ಲಿ ಕಾಣಿಸಿಕೊಂಡಿದೆ ಮತ್ತೊಂದು ಹೊಸ ರೋಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಚ್ಚರ…! ಭಾರತದಲ್ಲಿ ಕಾಣಿಸಿಕೊಂಡಿದೆ ಮತ್ತೊಂದು ಹೊಸ ರೋಗ

देश में कोरोना से ज्यादा खतरनाक ...

ಇಲ್ಲಿಯವರೆಗೆ ದೇಶದ ಜನರು ಕೊರೊನಾ ವೈರಸ್‌ಗೆ ಹೆದರುತ್ತಿದ್ದರು. ಈಗ ಕೊರೊನಾ ವೈರಸ್‌ಗಿಂತ ಹೆಚ್ಚು ಅಪಾಯಕಾರಿ ಕಾಯಿಲೆ ಕಾಣಿಸಿಕೊಂಡಿದೆ. ಈ ರೋಗದ ಮೊದಲ ಪ್ರಕರಣ ಗುಜರಾತ್‌ನ ಸೂರತ್‌ನಲ್ಲಿ ಕಂಡು ಬಂದಿದೆ. ಸೂರತ್‌ನ ಮಗುವಿನಲ್ಲಿ ಈ ರೋಗದ ಲಕ್ಷಣಗಳು ಕಂಡುಬಂದಿವೆ.

ಈ ರೋಗಕ್ಕೆ ಮಲ್ಟಿಸಿಸ್ಟಮ್ ಇನ್ಫ್ಲಾಮೇಟರಿ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಎಂಐಎಸ್-ಸಿ ಎಂದೂ ಕರೆಯುತ್ತಾರೆ. ಸೂರತ್‌ನಲ್ಲಿ ವಾಸಿಸುವ 10 ವರ್ಷದ ಮಗುವಿನ ದೇಹದಲ್ಲಿ ಮಲ್ಟಿ ಸಿಸ್ಟಮ್ ಇನ್ಫ್ಲಾಮೇಟರಿ ಸಿಂಡ್ರೋಮ್ ಕಂಡುಬಂದಿದೆ. ಈ ರೋಗವು ಯುಎಸ್ ಮತ್ತು ಯುರೋಪಿಯನ್ ದೇಶಗಳಲ್ಲಿ ಮಾತ್ರ ಇಲ್ಲಿಯವರೆಗೆ ಕಾಣಿಸಿಕೊಂಡಿತ್ತು.

ಮಗುವಿಗೆ ಜ್ವರ, ವಾಂತಿ, ಕೆಮ್ಮು, ಅತಿಸಾರವಿತ್ತು. ಕಣ್ಣು ಮತ್ತು ತುಟಿಗಳು ಕೆಂಪಾಗಿದ್ದವು. ಪರೀಕ್ಷೆ ನಡೆಸಿದಾಗ ಎಂಐಎಸ್-ಸಿ ಎಂಬುದು ಗೊತ್ತಾಗಿದೆ. ವೈದ್ಯರು ಚಿಕಿತ್ಸೆ ನೀಡಿ ಮಗುವನ್ನು ಮನೆಗೆ ಕಳುಹಿಸಿದ್ದಾರೆ. ಸ್ವಲ್ಪ ತಡವಾಗಿದ್ರೆ ಮಗುವಿಗೆ ಹೃದಯಾಘಾತವಾಗುವ ಸಾಧ್ಯತೆಯಿತ್ತಂತೆ. ಇದು 3 ವರ್ಷದಿಂದ 20 ವರ್ಷದವರನ್ನು ಕಾಡುತ್ತದೆ. ರೋಗ ಲಕ್ಷಣ ಕಾಣಿಸಿಕೊಳ್ತಿದ್ದಂತೆ ವೈದ್ಯರನ್ನು ಭೇಟಿಯಾಗುವುದು ಸೂಕ್ತ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...