alex Certify ಜಾಹೀರಾತಿಗೆ ಮೋದಿ ಸರ್ಕಾರ ವ್ಯಯಿಸಿದ ಹಣ ಎಷ್ಟು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಹೀರಾತಿಗೆ ಮೋದಿ ಸರ್ಕಾರ ವ್ಯಯಿಸಿದ ಹಣ ಎಷ್ಟು ಗೊತ್ತಾ…?

ಕಳೆದ ವರ್ಷದಲ್ಲಿ ಕೇಂದ್ರ ಸರ್ಕಾರ ಎಲೆಕ್ಟ್ರಾನಿಕ್​ ಮಾಧ್ಯಮ ಹಾಗೂ ಪತ್ರಿಕೆಗಳಿಗೆ ಜಾಹೀರಾತನ್ನ ನೀಡಲು ಬರೋಬ್ಬರಿ 713.20 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

ಆರ್​ಟಿಐ ಕಾಯಕರ್ತ ಜತಿನ್​ ದೇಸಾಯಿ ಜಾಹೀರಾತಿಗಾಗಿ ಮೋದಿ ಸರ್ಕಾರ ವ್ಯಯಿಸಿದ ಹಣದ ಬಗ್ಗೆ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಉತ್ತರ ನೀಡಿದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಔಟ್​ ರೀಚ್​ ಹಾಗೂ ಸಂವಹನ ಇಲಾಖೆ 2019-20ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಜಾಹೀರಾತಿಗಾಗಿ ಪ್ರತಿ ದಿನ ಸರಿಸುಮಾರು 1.95 ಕೋಟಿ ರೂಪಾಯಿ ವ್ಯಯಿಸಿದೆ ಅಂತಾ ಮಾಹಿತಿ ನೀಡಿದೆ.

ಆದರೆ ವಿದೇಶಿ ಮಾಧ್ಯಮಗಳಿಗೆ ಜಾಹೀರಾತು ನೀಡಲು ಸರ್ಕಾರ ಎಷ್ಟು ಹಣ ವ್ಯಯಿಸಿದೆ ಅನ್ನೋದ್ರ ಬಗ್ಗೆ ಈ ಇಲಾಖೆ ಯಾವುದೇ ಮಾಹಿತಿ ನೀಡಿಲ್ಲ. 713.20 ಕೋಟಿ ರೂಪಾಯಿಗಳಲ್ಲಿ 295.05 ಕೋಟಿ ಹಣವನ್ನ ಪತ್ರಿಕೆ ಜಾಹೀರಾತಿಗೆ ನೀಡಲಾಗಿದ್ರೆ 317.05 ಹಣವನ್ನ ಎಲೆಕ್ಟ್ರಾನಿಕ್​ ಮಾಧ್ಯಮಕ್ಕೆ ನೀಡಲಾಗಿದೆ. ಇನ್ನುಳಿದ 101.1 ಕೋಟಿಯನ್ನ ಮಾಧ್ಯಮೇತರ ಜಾಹೀರಾತಿಗಾಗಿ ವ್ಯಯಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...