alex Certify ಮನೆಯಲ್ಲಿ ಹಣ ಇಡುವವರು ಓದಲೇಬೇಕು ಈ ಸುದ್ದಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ಹಣ ಇಡುವವರು ಓದಲೇಬೇಕು ಈ ಸುದ್ದಿ….!

ಹಣ ಸಂಪಾದಿಸುವಷ್ಟೇ ಕಷ್ಟ ಹಣವನ್ನು ಸುರಕ್ಷಿತವಾಗಿಡುವುದು. ನೀವೂ ಮನೆ ಟ್ರಂಕ್ ನಲ್ಲಿ ನೋಟಿನ ಕಂತೆ ಇಟ್ಟಿದ್ದರೆ ಈ ಸುದ್ದಿಯನ್ನು ಓದಿ.

ಆಂಧ್ರಪ್ರದೇಶದ ವ್ಯಕ್ತಿಯೊಬ್ಬ ಮನೆ ಕಟ್ಟುವ ಕನಸು ಕಂಡು ಕೂಡಿಟ್ಟಿದ್ದ ಹಣವನ್ನು ಕಳೆದುಕೊಂಡಿದ್ದಾನೆ. ಅವನು ಇಟ್ಟಿದ ನೋಟುಗಳನ್ನು ಗೆದ್ದಲು ತಿಂದಿದೆ. ನಂತ್ರ ಆತ ಮಾಡಿದ ಕೆಲಸ ಜನರನ್ನು ಮಾತ್ರವಲ್ಲ ಪೊಲೀಸರನ್ನೂ ದಂಗಾಗಿಸಿದೆ.

ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಮಾಯಲವರಂನಲ್ಲಿ ಘಟನೆ ನಡೆದಿದೆ. ಬಿಜ್ಲಿ ಜಮಲೈಯ ಎಂಬಾತ ಪೆಟ್ಟಿಗೆಯಲ್ಲಿ 5 ಲಕ್ಷ ರೂಪಾಯಿ ಮೌಲ್ಯದ ನೋಟುಗಳನ್ನು ಇಟ್ಟುಕೊಂಡಿದ್ದ. ಇವೆಲ್ಲ 200 ಮತ್ತು 500 ನೋಟುಗಳಾಗಿದ್ದವು. ಕೆಲವು ತಿಂಗಳುಗಳ ನಂತರ ಪೆಟ್ಟಿಗೆ ತೆಗೆದು ನೋಡಿದ್ದಾನೆ. ಪೆಟ್ಟಿಗೆಯಲ್ಲಿಟ್ಟಿದ್ದ ನೋಟಿಗೆ ಗೆದ್ದಲು ಹಿಡಿದಿರುವುದನ್ನು ನೋಡಿ ದಂಗಾಗಿದ್ದಾನೆ.

ಗ್ಯಾಸ್ ಸಿಲಿಂಡರ್ ಗೆ ಸಿಕ್ತಿದೆಯಾ ಸಬ್ಸಿಡಿ…..? ಹೀಗೆ ಚೆಕ್ ಮಾಡಿ

ಜಮಲೈಯ ಹಂದಿ ಸಾಕಿ ಜೀವನ ನಡೆಸುತ್ತಿದ್ದಾನೆ. ಮನೆ ಕಟ್ಟಲು ಈ ಹಣವನ್ನು ಸಂಗ್ರಹಿಸಿಟ್ಟಿದ್ದ. ಬ್ಯಾಂಕ್ ಖಾತೆ ಇಲ್ಲದ ಕಾರಣ ಪೆಟ್ಟಿಗೆಯಲ್ಲಿ ಹಣ ಇಟ್ಟಿದ್ದ. ಗೆದ್ದಲು ತಿಂದಿದ್ದನ್ನು ನೋಡಿ ಜಮಲೈಯ ಮಾತ್ರವಲ್ಲ ಕುಟುಂಬಸ್ಥರೆಲ್ಲ ಕಣ್ಣಿರಿಡುತ್ತಿದ್ದಾರೆ. ಇದ್ರಿಂದ ಬೇಸರಗೊಂಡ ಜಮಲೈಯ, ಹಣವನ್ನು ಸ್ಥಳೀಯ ಮಕ್ಕಳಿಗೆ ಹಂಚಿದ್ದಾನೆ. ಬೇಕಾದ್ದನ್ನು ಖರೀದಿ ಮಾಡುವಂತೆ ಹೇಳಿದ್ದಾನೆ. ಇದು ಸ್ಥಳೀಯರಿಗೆ ಗೊತ್ತಾಗಿದೆ. ಅವರು ಪೊಲೀಸರಿಗೆ ವಿಷ್ಯ ತಿಳಿಸಿದ್ದಾರೆ. ಪೊಲೀಸರು ಬಂದು ವಿಚಾರಣೆ ಮಾಡಿದಾಗ ಗೆದ್ದಲು ತಿಂದಿರುವುದು ಬಹಿರಂಗವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...