alex Certify ಈ ವಿಚಾರದಲ್ಲಿ ಚೀನಾವನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದ ಭಾರತ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಿಚಾರದಲ್ಲಿ ಚೀನಾವನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದ ಭಾರತ..!

ನಮ್ಮ ದೇಶದಲ್ಲಿ ಮಾಲ್ಡೀವ್ಸ್​​ ಪ್ರಿಯರಿಗೇನು ಬರಗಾಲವಿಲ್ಲ. ಮಾಲ್ಡೀವ್ಸ್​​ನಲ್ಲಿ ಪ್ರವಾಸಿಗರಿಗೆ ಪ್ರವೇಶ ಮುಕ್ತ ಮಾಡಿದ ಮೇಲೆ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ.

2020ರ ಅಂತ್ಯದಲ್ಲಿ ಭಾರತದ 62,905 ಮಂದಿ ಪ್ರವಾಸಿಗರು ಮಾಲ್ಡೀವ್ಸ್​​ಗೆ ತೆರಳಿದ್ದಾರೆ. ಅಲ್ಲದೇ ವಿಶ್ವದ ಎಲ್ಲಾ ಪ್ರವಾಸಿಗರಿಗಿಂತ ಮಾಲ್ಡೀವ್ಸ್​ಗೆ ತೆರಳಿದ ಭಾರತೀಯರ ಸಂಖ್ಯೆ ಹೆಚ್ಚು.

2019ರಲ್ಲಿ ಮಾಲ್ಡೀವ್ಸ್ ಪ್ರವಾಸ ಮಾಡಿದವರ ಪೈಕಿ ಚೀನಾ ಮೊದಲ ಸ್ಥಾನದಲ್ಲಿತ್ತು. ಹಾಗೂ ಭಾರತ ಎರಡನೇ ಸ್ಥಾನವನ್ನ ಪಡೆದಿತ್ತು. ಈ ವರ್ಷದ ಆರಂಭದಲ್ಲಿ ಮಾಲ್ಡೀವ್ಸ್​ ಪ್ರವಾಸಿಗರಿಗೆ ನಿರ್ಬಂಧ ಹೇರಿತ್ತು. ಜುಲೈ 15ರಿಂದ ಪ್ರವಾಸಿಗರಿಗೆ ಮಾಲ್ಡೀವ್ಸ್ ಪ್ರವಾಸಕ್ಕೆ ಅವಕಾಶ ನೀಡಿದ್ದೇ ತಡ ಭಾರತದಿಂದ ಹೆಚ್ಚುವರಿ ವಿಮಾನಗಳನ್ನ ಮಾಲ್ಡೀವ್ಸ್​ಗೆ ಬಿಡಲಾಗಿದೆ.

ಈ ಬಾರಿ ಭಾರತದ ಬಳಿಕ ರಷ್ಯಾ 61,388 ಪ್ರವಾಸಿಗರೊಂದಿಗೆ 2ನೇ ಸ್ಥಾನವನ್ನ ಪಡೆದುಕೊಂಡಿದೆ. ಯುಕೆ 52,716 ಪ್ರವಾಸಿಗರೊಂದಿಗೆ ಮೂರನೇ ಸ್ಥಾನ ಪಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...