alex Certify ಒಂದೇ ಶ್ವಾಸಕೋಶ ಹೊಂದಿದ್ದರೂ ಕೊರೊನಾ ಸೋಲಿಸಿದ ನರ್ಸ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಶ್ವಾಸಕೋಶ ಹೊಂದಿದ್ದರೂ ಕೊರೊನಾ ಸೋಲಿಸಿದ ನರ್ಸ್​..!

ಭಾರತವು ಕೊರೊನಾ 2ನೆ ಅಲೆಯನ್ನ ಎದುರಿಸುತ್ತಿದೆ. ಕೊರೊನಾದಿಂದ ಸಾವಿಗೀಡಾಗುತ್ತಿರುವವರು ಒಂದೆಡೆಯಾದರೆ ಕೋವಿಡ್​ ವಿರುದ್ಧ ಸೆಣಸಾಡಿ ಜಯಿಸಿದವರೂ ನಮ್ಮಲ್ಲಿದ್ದಾರೆ. ಇದೇ ರೀತಿ ಮಧ್ಯ ಪ್ರದೇಶದ ನರ್ಸ್​ ಒಬ್ಬರು ಕೋವಿಡ್​ನಿಂದ ಪಾರಾದ ಘಟನೆ ಸ್ಪೂರ್ತಿದಾಯಕವಾಗಿದೆ.

ಮಧ್ಯಮ ವಯಸ್ಸಿನ ಮಹಿಳಾ ನರ್ಸ್ ಒಂದೇ ಶ್ವಾಸಕೋಶವನ್ನ ಹೊಂದಿದ್ದರೂ ಸಹ ಕೋವಿಡ್​ ವಿರುದ್ಧ ಜಯಶಾಲಿಯಾಗಿದ್ದಾರೆ.

39 ವರ್ಷದ ಪ್ರಫುಲಿತ್​ ಪೀಟರ್​​ ಚಿಕ್ಕ ವಯಸ್ಸಿನಲ್ಲಾದ ಅಪಘಾತದಿಂದ ಒಂದು ಶ್ವಾಸಕೋಶವನ್ನ ಕಳೆದುಕೊಂಡಿದ್ದರು. ಮಧ್ಯ ಪ್ರದೇಶದ ತಿಕಾಂಗರ್​ ನಗರ ಆಸ್ಪತ್ರೆಯಲ್ಲಿ ಇವರನ್ನ ಕೋವಿಡ್​ ವಾರ್ಡ್​ಗೆ ಹಾಕಲಾಗಿತ್ತು. ಇಲ್ಲಿಂದ ಸೋಂಕಿಗೀಡಾದ ಪ್ರಫುಲ್ಲಿತ್​​ ಚಿಕಿತ್ಸೆಗೆ ಒಳಗಾದರು. ಒಂದೇ ಒಂದು ಶ್ವಾಸಕೋಶ ಹೊಂದಿದ್ದ ಈಕೆ ಕೋವಿಡ್​ನಿಂದ ಪಾರಾಗೋದು ಸುಲಭದ ಕೆಲಸವಂತೂ ಆಗಿರಲಿಲ್ಲ.

ಕೋವಿಡ್​ ಸೋಂಕಿತರಿಗಾಗಿ ಆಟೋದಲ್ಲೇ ಅಂಬುಲೆನ್ಸ್‌ ಸೇವೆ

ತನಗೆ ಸೋಂಕಿದೆ ಎಂದು ತಿಳಿದ ತಕ್ಷಣ ಪೀಟರ್​ ಐಸೋಲೇಷನ್​ಗೆ ಒಳಗಾದರು. ಅಲ್ಲದೇ ನಿತ್ಯ ಯೋಗಾಸನ, ಪ್ರಾಣಾಯಾಮ, ಉಸಿರಾಟ ಸಂಬಂಧಿ ವ್ಯಾಯಾಮ ಹಾಗೂ ಬಲೂನುಗಳನ್ನ ಊದುವ ಮೂಲಕ ಶ್ವಾಸಕೋಶದ ಆರೋಗ್ಯವನ್ನ ಸುಧಾರಿಸಿದರು. ಕೊರೊನಾ ಲಸಿಕೆಯ ಎರಡೂ ಡೋಸ್​ಗಳನ್ನ ಪಡೆದ ಬಳಿಕ ಪೀಟರ್​ ಸೋಂಕಿಗೆ ಒಳಗಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...