alex Certify ಕೋವಿಡ್​ ಸೋಂಕಿತರಿಗಾಗಿ ಆಟೋದಲ್ಲೇ ಅಂಬುಲೆನ್ಸ್‌ ಸೇವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ ಸೋಂಕಿತರಿಗಾಗಿ ಆಟೋದಲ್ಲೇ ಅಂಬುಲೆನ್ಸ್‌ ಸೇವೆ

ಕೋವಿಡ್​ 19 ರಣಕೇಕೆ ಎಷ್ಟರ ಮಟ್ಟಿಗೆ ಭೀಕರವಾಗಿದೆ ಎಂದರೆ ದೇಶದಲ್ಲಿ ವೈದ್ಯಕೀಯ ಸೌಲಭ್ಯಗಳಿಗೆ ಕೊರತೆ ಉಂಟಾಗ್ತಿದೆ. ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುತ್ತಿರುವ ಜನತೆಗೇ ಸರಿಯಾದ ಸಮಯಕ್ಕೆ ಆಕ್ಸಿಜನ್​ ಸಿಗುತ್ತಿಲ್ಲ.

ಈ ಎಲ್ಲಾ ಸಮಸ್ಯೆಗಳನ್ನ ಗಮನಿಸಿದ ಮಹಾರಾಷ್ಟ್ರದ ಪುಣೆಯ ಮೂವರು ಆಟೋ ಚಾಲಕರು ಜುಗಾಡ್​ ಆಂಬುಲೆನ್ಸ್ ಎಂಬ ಹೊಸ ಸೇವೆಯನ್ನ ಆರಂಭಿಸಿದ್ದಾರೆ. ಆಟೋರಿಕ್ಷಾಗಳಲ್ಲಿ ವೈದ್ಯಕೀಯ ಆಮ್ಲಜನಕದ ಸೇವೆಯನ್ನ ಒದಗಿಸಿ ಇದನ್ನ ಆಂಬುಲೆನ್ಸ್ ಆಗಿ ಮಾರ್ಪಡಿಸಿದ್ದಾರೆ.

ಈ ಜುಗಾಡ್​ ಆಂಬುಲೆನ್ಸ್ ಎಂಬ ಪರಿಕಲ್ಪನೆಯನ್ನ ತಂದ ಡಾ. ಕೇಶವ್​ ಕೃಷ್ಣ ನಗರ್​ ಎಂಬವರು ಈ ವಿಚಾರವಾಗಿ ಮಾತನಾಡಿದ್ದು, ಈ ಜುಗಾಡ್​ ಆಂಬುಲೆನ್ಸ್​ನಲ್ಲಿ ಸೋಂಕಿತನಿಗೆ 6-7 ಗಂಟೆಯವರೆಗೆ ವೈದ್ಯಕೀಯ ಆಮ್ಲಜನಕದ ಸೇವೆ ಸಿಗಲಿದೆ. ಚಾಲಕರಿಗೆ ಈ ಬಗ್ಗೆ ತರಬೇತಿ ನೀಡಲಾಗಿದೆ.

ಆಸ್ಪತ್ರೆಗಾಗಿ, ಆಕ್ಸಿಜನ್​ಗಾಗಿ, ಆಂಬುಲೆನ್ಸ್​ಗಾಗಿ ಜನರು ಪರಿತಪಿಸುತ್ತಿರೋದನ್ನ ಕಂಡ ಬಳಿಕ ಈ ಸೇವೆಯನ್ನ ಆರಂಭಿಸಲು ನಿರ್ಧರಿಸಿದ್ವಿ. ಇದಕ್ಕಾಗಿ ಸಹಾಯವಾಣಿಯನ್ನೂ ಇಡಲಾಗಿದ್ದು ಇದಕ್ಕೆ ಕರೆ ಮಾಡಿ ಜನತೆಗೆ ಜುಗಾಡ್ ಆಂಬುಲೆನ್ಸ್ ಸೇವೆ ಪಡೆಯಬಹುದು ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...