alex Certify ಕೇಂದ್ರದಿಂದ ಮತ್ತೊಂದು ಗುಡ್ ನ್ಯೂಸ್: ನೌಕರರಿಗೆ LTC ನಗದು ಖರ್ಚು ಮಾಡುವ ಆಯ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರದಿಂದ ಮತ್ತೊಂದು ಗುಡ್ ನ್ಯೂಸ್: ನೌಕರರಿಗೆ LTC ನಗದು ಖರ್ಚು ಮಾಡುವ ಆಯ್ಕೆ

ನವದೆಹಲಿ: ಕೇಂದ್ರ ಸರ್ಕಾರ ಸೋಮವಾರ ಆರ್ಥಿಕ ಉತ್ತೇಜನ ಪ್ಯಾಕೇಜ್ ಪ್ರಕಟಿಸಿದ್ದು ಕೇಂದ್ರ ಸರ್ಕಾರಿ ನೌಕರರಿಗೆ ರಜಾಕಾಲದ ಪ್ರಯಾಣ ಭತ್ಯೆ(LTC) ನಗದು ಕೊಡುಗೆ ನೀಡಲಾಗಿದೆ.

ಎಲ್.ಟಿ.ಸಿ. ನಗದು ಯೋಜನೆಯನ್ನು ಪ್ರಯಾಣಿಸದಿದ್ದರು ಪ್ರಯೋಜನ ಪಡೆಯಲು ಆಯ್ಕೆಯ ಅವಕಾಶ ನೀಡಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಯೋಜನೆಯ ಅನ್ವಯ ಪ್ರಯಾಣ ಹೊರತುಪಡಿಸಿ ಯಾವುದಾದರೂ ಖರ್ಚು ಮಾಡುವ ಆಯ್ಕೆ ನೀಡಲಾಗಿದೆ.

ಕೇಂದ್ರ ಸರ್ಕಾರಿ ನೌಕರರು ರಜೆ ಪ್ರಯಾಣದ ರಿಯಾಯಿತಿ ಅಥವಾ ರಜೆ ಪ್ರಯಾಣ ಭತ್ಯೆಗಳ ತೆರಿಗೆ ವಿನಾಯಿತಿ ಬದಲಾಗಿ ಸರಕು ಮತ್ತು ಸೇವೆಗಳನ್ನು ಖರೀದಿಸಲು/ಪಡೆಯಲು ಅರ್ಹರಾಗಿರುತ್ತಾರೆ.

ರಜೆ ಎನ್ ಕ್ಯಾಶ್ ಮೆಂಟ್ ಗೆ ತೆರಿಗೆ ವಿಧಿಸಲಾಗುತ್ತದೆ. ಕೊರೋನಾ ಸಾಂಕ್ರಮಿಕ ರೋಗ ಹಿನ್ನೆಲೆಯಲ್ಲಿ ಪ್ರಯಾಣಕ್ಕೆ ನಿರ್ಬಂಧ ಇರುವುದರಿಂದ ಕೇಂದ್ರ ಸರ್ಕಾರಿ ನೌಕರರು ಎಲ್.ಟಿ.ಸಿ. ಶುಲ್ಕ ಮತ್ತು ರಜೆ ಎನ್ ಕ್ಯಾಶ್ ಮೆಂಟ್ ಗೆ ಸಮಾನವಾದ ನಗದು ಹಣವನ್ನು ಪಡೆಯುವ ಆಯ್ಕೆಯನ್ನು ಹೊಂದಿರುತ್ತಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...