alex Certify ಶಾಲೆ ಬಿಟ್ಟರೂ ಮಾತೃಭಾಷಾ ಪ್ರೇಮದಿಂದಲೇ ಈಗ ವಿಕಿಪೀಡಿಯಾ ಎಡಿಟರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲೆ ಬಿಟ್ಟರೂ ಮಾತೃಭಾಷಾ ಪ್ರೇಮದಿಂದಲೇ ಈಗ ವಿಕಿಪೀಡಿಯಾ ಎಡಿಟರ್​..!

ನೀವು ಇದನ್ನ ಮಾತೃಭಾಷಾ ಪ್ರೇಮ ಅನ್ನಿ ಇಲ್ಲವೇ ಹೊಸದನ್ನ ಅನ್ವೇಷಣೆ ಮಾಡುವ ಬುದ್ಧಿ ಎಂದುಕೊಳ್ಳಿ. ಮಧ್ಯದಲ್ಲೇ ಶಾಲೆಯನ್ನ ಬಿಟ್ಟು ಕುಶಲಕರ್ಮಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಇದೀಗ ವಿಕಿಪಿಡಿಯಾ ಎಡಿಟರ್​ ಆಗಿದ್ದಾನೆ. ವಿಕಿಪಿಡಿಯಾಗೆ ಈತ 1,800 ಹಿಂದಿ ಲೇಖನಗಳನ್ನ ಬರೆದುಕೊಟ್ಟಿದ್ದಾನೆ.

ತನ್ನ ಮೊಬೈಲ್​ನಲ್ಲೇ ಟೈಪ್​ ಮಾಡುವ ಮೂಲಕ ಈವರೆಗೆ 57000 ಪುಟಗಳನ್ನ ಬರೆದಿದ್ದಾನೆ. ಈತನ ಹಿಂದಿ ಪ್ರೇಮವನ್ನ ಗೌರವಿಸಿದ ವಿಕಿಪೀಡಿಯಾ ಈತನಿಗೆ ಉಡುಗೊರೆ ರೂಪದಲ್ಲಿ ಉಚಿತ ಲ್ಯಾಪ್​ಟಾಪ್​ ಹಾಗೂ ವೈ ಫೈ ಸೌಕರ್ಯ ನೀಡಿದೆ.

ಜೋಧಪುರದ ಪುಟ್ಟ ಹಳ್ಳಿಯ ನಿವಾಸಿಯಾಗಿರುವ 22 ವರ್ಷದ ರಾಜು ಜಾಂಗಿದ್, ಕುಟುಂಬದಿಂದ ಬಂದ ಕುಶಲಕರ್ಮಿ ಕೆಲಸವನ್ನ ಮುಂದುವರಿಸಿಕೊಂಡು ಹೋಗ್ತಿದ್ದಾರೆ. ವಿಕಿಪೀಡಿಯಾದಲ್ಲಿ ಹಿಂದಿ ಭಾಷೆಯಲ್ಲಿ ಏನನ್ನಾದರೂ ಹುಡುಕಾಟ ನಡೆಸುವವರಿಗೆ ನೆರವಾಗಬೇಕು ಅಂತಾ ರಾಜು ಈ ಕೆಲಸಕ್ಕೆ ಕೈ ಹಾಕಿದ್ದಾರೆ.

ರಾಜು ಪ್ರಸ್ತುತ ವಿಕಿ ಸ್ವಾಸ್ತಾ ಎಂಬ ವಿಕಿಪೀಡಿಯಾದ ವಿಶೇಷ ಯೋಜನೆಗಾಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ರಾಜು ಆರೋಗ್ಯ ಸಂಬಂಧಿತ ಲೇಖನಗಳ ಮಾಹಿತಿಯನ್ನು ಹಾಕುತ್ತಿದ್ದಾರೆ. ಅಲ್ಲದೆ, ಅವರು ಭಾರತದಲ್ಲಿ ವಿಕಿಪೀಡಿಯಾದ ಅನೇಕ ಸಮಾವೇಶಗಳಲ್ಲಿ ಭಾಗವಹಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...