alex Certify ನೀರು ಕುಡಿಯುವುದನ್ನು ಕಲಿಯುತ್ತಿರುವ ಪುಟ್ಟ ಆನೆ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀರು ಕುಡಿಯುವುದನ್ನು ಕಲಿಯುತ್ತಿರುವ ಪುಟ್ಟ ಆನೆ ವಿಡಿಯೋ ವೈರಲ್

ಕೀನ್ಯಾದ ಕಾಡೊಂದರಲ್ಲಿ ಅನಾಥ ಆನೆಯೊಂದು ಸೊಂಡಿಲಿನ ಮೂಲಕ ನೀರು ಕುಡಿಯುವ ವಿಡಿಯೋ ಇದೀಗ ವೈರಲ್‌ ಆಗಿದೆ.

ಶೆಲ್ಡ್ರಿಕ್‌ ವೈಲ್ಡ್‌ಲೈಫ್‌ ತಮ್ಮ ಟ್ವೀಟರ್‌ ಖಾತೆಯಲ್ಲಿ ಈ ವಿಡಿಯೋವನ್ನು ಹಾಕಿದ್ದಾರೆ. ಎರಡು ವರ್ಷದ ಆನೆ ಲರ್ರೋ ಸೊಂಡಿಲಿನ ಮೂಲಕ ನೀರು ಕುಡಿಯುವುದನ್ನು ಕಲಿಯುತ್ತಿದೆ. ಆರಂಭದಲ್ಲಿ ಸೊಂಡಿಲಿನಿಂದ ನೀರು ಬಾಯಿಗೆ ಹಾಕುವಾಗ ನೀರು ಕೆಳಕ್ಕೆ ಸೋರುತ್ತಿತ್ತು.

ಬಳಿಕ ಎರಡು ಮೂರು ಬಾರಿಯ ಪ್ರಯತ್ನದ ನಂತರ ಸರಿಯಾದ ರೀತಿಯಲ್ಲಿ ನೀರು ಕುಡಿಯುವುದನ್ನು ಕಲಿತಿದೆ. ಆ ವೇಳೆ ಅದರ ಸಂಭ್ರಮ ಮನೆ ಮಾಡಿತ್ತು.

ಇದೀಗ ಈ ವಿಡಿಯೋ ವೈರಲ್‌ ಆಗಿದ್ದು ನೆಟ್ಟಿಗರು ಆನೆ ಕಲಿತ ಹೊಸ ಪಾಠಕ್ಕೆ ಶಹಬಾಸ್‌ಗಿರಿ ನೀಡಿದ್ದಾರೆ. ಆನೆ ಈ ರೀತಿ ಹಂತ ಹಂತವಾಗಿ ಕಲಿತಿರುವ 47 ಸೆಕೆಂಡ್‌ನ ವಿಡಿಯೋ ಇದೀಗ ಭಾರಿ ವೈರಲ್‌ ಆಗಿದ್ದು, 5 ಸಾವಿರಕ್ಕೂ ಹೆಚ್ಚು ಮಂದಿ ನೋಡಿದ್ದಾರೆ. ಸುಮಾರು ಸಾವಿರಕ್ಕೂ ಹೆಚ್ಚು ಮಂದಿ ಲೈಕ್‌ ಮಾಡಿದ್ದು, 176 ಕಾಮೆಂಟ್‌ಗಳು ಬಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...