alex Certify BIG NEWS: ಗಡಿ ನುಸುಳಲು ಯತ್ನಿಸಿದ ಚೀನಾ ಯೋಧರಿಗೆ ಗುಂಡೇಟು: ಗಡಿ ಉದ್ವಿಗ್ನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗಡಿ ನುಸುಳಲು ಯತ್ನಿಸಿದ ಚೀನಾ ಯೋಧರಿಗೆ ಗುಂಡೇಟು: ಗಡಿ ಉದ್ವಿಗ್ನ

India-China standoff: China accuses India of crossing LAC, firing warning  shots in Eastern Ladakh | India News | Zee News

ನವದೆಹಲಿ: ಭಾರತ ಮತ್ತು ಚೀನಾ ಗಡಿಯಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ ಉಂಟಾಗಿದ್ದು ಗುಂಡಿನ ಕಾಳಗ ನಡೆದಿದೆ ಎಂದು ಹೇಳಲಾಗಿದೆ.

ಪಾಂಗಾಂಗ್ ಸರೋವರದ ಬಳಿ ಚೀನಿ ಸೈನಿಕರು ಹಾಗೂ ಭಾರತೀಯ ಯೋಧರು ಬೀಡುಬಿಟ್ಟಿದ್ದಾರೆ. ಚೀನಿ ಯೋಧರು ಗಡಿ ನುಸುಳಲು ಯತ್ನಿಸಿದ ವೇಳೆ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದ್ದು ಮತ್ತೆ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಚೀನಾ ಸರ್ಕಾರದ ಒಡೆತನದ ಗ್ಲೋಬಲ್ ಟೈಮ್ಸ್ ಸೋಮವಾರ ಭಾರತೀಯ ಪಡೆಗಳು ಪಾಂಗೊಂಗ್ ತ್ಸೋ ಸರೋವರದ ದಕ್ಷಿಣ ದಂಡೆಯ ಬಳಿ ವಾಸ್ತವ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ದಾಟಿದೆ ಎಂದು ಹೇಳಿದೆ.

ಪೂರ್ವ ಲಡಾಕ್ ಸೆಕ್ಟರ್‌ನ ಲೈನ್‌ ಆಫ್‌ ಆಕ್ಚುವಲ್‌ ಕಂಟ್ರೋಲ್‌(ಎಲ್‌ಎಸಿ)ಯಲ್ಲಿ ಗುಂಡಿನ ದಾಳಿ ನಡೆದಿದ್ದು, ಈ ಸ್ಥಳದಲ್ಲಿ ಭಾರತ ಮತ್ತು ಚೀನಾದ ಸೈನಿಕರು ಮೂರು ತಿಂಗಳಿಗೂ ಹೆಚ್ಚು ಕಾಲ ಬೀಡುಬಿಟ್ಟಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ:

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...