alex Certify ಸಾಲದ ಹೊರೆ ತಾಳಲಾರದೆ ಕಿಡ್ನಿ ಮಾರಾಟಕ್ಕಿಟ್ಟ ಯುವಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲದ ಹೊರೆ ತಾಳಲಾರದೆ ಕಿಡ್ನಿ ಮಾರಾಟಕ್ಕಿಟ್ಟ ಯುವಕ…!

ಶ್ರೀನಗರ: ನಿವೇಶನ, ಮನೆ, ಫುಡ್ ಪ್ರಾಡಕ್ಟ್ ಹೀಗೆ ಹಲವು ವಿಚಾರಗಳಿಗೆ ಜಾಹೀರಾತು ನೀಡುವುದು ಸಾಮಾನ್ಯ. ಆದರೆ ಇಲ್ಲೋರ್ವ ವ್ಯಕ್ತಿ ತನ್ನ ಕಿಡ್ನಿ ಮಾರಾಟಕ್ಕಿದೆ ಎಂದು ಜಾಹೀರಾತು ನೀಡಿದ್ದಾನೆ.

ಜಮ್ಮು-ಕಾಶ್ಮೀರದ ಕುಲ್ಗಾಮ್ ನಿವಾಸಿ ಸಬ್ಜರ್ ಅಹ್ಮದ್ ಖಾನ್ (28) ಎಂಬಾತ ಇಂತದ್ದೊಂದು ಜಾಹೀರಾತು ನೀಡಿ ಸುದ್ದಿಯಾಗಿದ್ದಾನೆ. ಸಬ್ಜರ್ ಹೀಗೆ ಕಿಡ್ನಿ ಮಾರಾಟಕ್ಕಿದೆ ಎಂದು ಜಾಹೀರಾತು ನೀಡಲು ಕಾರಣ ಸಾಲದ ಹೊರೆ.

ಸಬ್ಜರ್ ಕಾರಿನ ಸೇಲ್ಸ್ ಮೆನ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು, ಅದಾದ ಬಳಿಕ ಕೊರೊನಾ ಲಾಕ್ ಡೌನ್ ನಿಂದಾಗಿ ವ್ಯವಹಾರ ಸ್ಥಗಿತಗೊಂಡು ನಷ್ಟವಾಗಿ ಜೀವನ ನಿರ್ವಹಣೆ ಕಷ್ಟವಾಗಿದೆ. ಇದರಿಂದಾಗಿ ಸಾಲದ ಮೊರೆ ಹೋಗಿದ್ದಾನೆ.

91 ಲಕ್ಷ ರೂಪಾಯಿ ಸಾಲ ತೀರಿಸಲು ಮಾರ್ಗವಿಲ್ಲದೇ ಇದೀಗ ತನ್ನ ಕಿಡ್ನಿ ಮಾರಾಟಕ್ಕೆ ನಿರ್ಧರಿಸಿ ಹೀಗೆ ಜಾಹೀರಾತು ನೀಡಿದ್ದಾನೆ. ಜಾಹೀರಾತು ನೋಡಿ ಹಲವರು ಕಿಡ್ನಿ ಬೇಕೆಂದು ಕರೆ ಮಾಡುತ್ತಿದ್ದಾರಂತೆ ಹೀಗೆಂದು ಸಬ್ಜರ್ ತಿಳಿಸಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...