alex Certify ಕೇರಳ ಯುವತಿಗೆ ಕಮರ್ಷಿಯಲ್ ವಿಮಾನದ ಮೊದಲ ಪೈಲೆಟ್ ಎಂಬ ‘ಹೆಗ್ಗಳಿಕೆ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇರಳ ಯುವತಿಗೆ ಕಮರ್ಷಿಯಲ್ ವಿಮಾನದ ಮೊದಲ ಪೈಲೆಟ್ ಎಂಬ ‘ಹೆಗ್ಗಳಿಕೆ’

ಕೇರಳದ ತಿರುವನಂತಪುರಂನ ಕುಗ್ರಾಮದಿಂದ ಬಂದ 23 ವರ್ಷದ ಯುವತಿ ಜೆನಿ ಜೆರೋಮ್​​ ಏರ್​ ಅರೇಬಿಯಾದ ಜಿ 9 449 ವಿಮಾನದಲ್ಲಿ ಸಹ ಪೈಲಟ್​ ಆಗಿ ಕಾರ್ಯನಿರ್ವಹಿಸಿದ್ದಾರೆ.

ಶಾರ್ಜಾದಿಂದ ತಿರುವನಂತಪುರಂ ಮಾರ್ಗದಲ್ಲಿ ಸಹ ಪೈಲೆಟ್​ ಆಗಿ ಕಾರ್ಯನಿರ್ವಹಿಸುವ ಮೂಲಕ ಕೇರಳದ ಮೊದಲ ಮಹಿಳಾ ವಾಣಿಜ್ಯ ಪೈಲಟ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪ್ರಸ್ತುತ ತನ್ನ ಪೋಷಕರೊಂದಿಗೆ ಅಜ್ಮಾನ್​ನಲ್ಲಿ ವಾಸವಿರುವ ಜೆನಿ ಬಾಲ್ಯದಿಂದಲೇ ಪೈಲಟ್​ ಆಗುವ ಕನಸನ್ನ ಹೊಂದಿದ್ದರು. ಇದೀಗ ತಮ್ಮ ತವರು ರಾಜ್ಯದಲ್ಲಿ ಕೋ ಪೈಲಟ್​ ಆಗಿ ಕಾರ್ಯನಿರ್ವಹಿಸುವ ಮೂಲಕ ಕನಸನ್ನ ನನಸು ಮಾಡಿಕೊಂಡಿದ್ದಾರೆ. ಜೆನಿಯ ಈ ಸಾಧನೆಗೆ ತಿರುವನಂತಪುರಂ ಸಂಸದ ಶಶಿ ತರೂರ್​ ಸೇರಿದಂತೆ ಸಾಕಷ್ಟು ಮಂದಿ ಸೋಶಿಯಲ್​ ಮೀಡಿಯಾದಲ್ಲಿ ಅಭಿನಂದನೆಯ ಮಹಾಪೂರವನ್ನೇ ಹರಿಸಿದ್ದಾರೆ.

ನಿವೃತ್ತಿ ನಂತ್ರ ಪ್ರತಿ ತಿಂಗಳು ಸಿಗಲಿದೆ ನಿಯಮಿತ ಹಣ

ವಾಣಿಜ್ಯ ವಿಮಾನದಲ್ಲಿ ಮೊದಲ ಬಾರಿಗೆ ಸಹ ಪೈಲಟ್​ ಆಗಿ ಸೇವೆ ಸಲ್ಲಿಸಿದ ತಿರುವನಂತಪುರಂನ ಕೊಚಿತೊರಾ ಗ್ರಾಮದ ಜೆನಿ ಜೆರೋಮ್​ಗೆ ನನ್ನ ಅಭಿನಂದನೆಗಳು. ಮೀನುಗಾರಿಕೆಯನ್ನ ನೆಚ್ಚಿಕೊಂಡು ಬಂದ ಪುಟ್ಟ ಗ್ರಾಮಕ್ಕೆ ಸೇರಿದ ಈ ಹೆಣ್ಣುಮಗಳು ಇದೀಗ ಶಾರ್ಜಾದಿಂದ ತಿರುವನಂತಪುರಂವರೆಗೆ ಏರ್​ ಅರೇಬಿಯಾ ವಿಮಾನದಲ್ಲಿ ಸಹ ಪೈಲಟ್​ ಆಗಿ ಕಾರ್ಯ ನಿರ್ವಹಿಸುವ ಮೂಲಕ ತಮ್ಮ ಬಾಲ್ಯದ ಕನಸನ್ನ ನನಸು ಮಾಡಿಕೊಂಡಿದ್ದಾರೆ. ಈಕೆ ನಿಜಕ್ಕೂ ಒಂದು ಸ್ಪೂರ್ತಿ ಎಂದು ಶಶಿ ತರೂರ್​ ಟ್ವೀಟಾಯಿಸಿದ್ದಾರೆ.

ಮನಕಲಕುತ್ತೆ ಬಡ ಹುಡುಗನ ಕಣ್ಣೀರ ಕಥೆ

ಇನ್ನು ಈ ವಿಚಾರವಾಗಿ ಮಾತನಾಡಿರುವ ಜೆನಿ ಸೋದರ ಸಂಬಂಧಿ ಶೆರಿನ್​, ಜೆನಿಗೆ ಹಾರಾಟದ ಬಗ್ಗೆ ಮೊದಲಿನಿಂದಲೂ ಆಸಕ್ತಿ ಇತ್ತು. ಪೈಲಟ್​ ಆಗೋದು ಆಕೆಯ ಬಾಲ್ಯದ ಕನಸು. ಕೇವಲ ಜೆನಿ ಮಾತ್ರವಲ್ಲದೇ ಆಕೆಯ ತಂದೆ ಜೆರೋಮ್​ ಸಹ ಮಗಳನ್ನ ಪೈಲಟ್​ ಮಾಡಬೇಕೆಂಬ ಕನಸನ್ನ ಹೊಂದಿದ್ದರು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...