alex Certify ಮದುವೆಯಾದ ಮೂರೇ ತಿಂಗಳಿಗೆ ಮಗಳ ಗಂಡನನ್ನೇ ಕೊಲೆಗೈದ ಪಾಪಿ ತಂದೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾದ ಮೂರೇ ತಿಂಗಳಿಗೆ ಮಗಳ ಗಂಡನನ್ನೇ ಕೊಲೆಗೈದ ಪಾಪಿ ತಂದೆ…!

27 ವರ್ಷದ ವ್ಯಕ್ತಿಯ ಮೇಲೆ ಆತನ ಮಾವನ ಮನೆಯವರೇ ದಾಳಿ ನಡೆಸಿ ಕೊಲೆ ಮಾಡಿದ ದಾರುಣ ಘಟನೆ ಕೇರಳದ ಪಾಲಕ್ಕಡ್​ ಜಿಲ್ಲೆಯಲ್ಲಿ ನಡೆದಿದೆ. ಕಳೆದ ಮೂರು ತಿಂಗಳ ಹಿಂದಷ್ಟೇ ದಾಳಿ ನಡೆಸಿದ ಮನೆಯ ಯುವತಿಯ ಜೊತೆ ಕೊಲೆಯಾದ ವ್ಯಕ್ತಿ ಮದುವೆಯಾಗಿದ್ದ. ಪ್ರಕರಣ ಸಂಬಂಧ ಪತ್ನಿ ಕುಟುಂಬಸ್ಥರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅನೀಶ್ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಆತನ ಪತ್ನಿಯ ತಂದೆ ಪ್ರಭುಕುಮಾರ್​ ಹಾಗೂ ​ ಚಿಕ್ಕಪ್ಪ ಸುರೇಶ್ ಏಕಾಏಕಿ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ ಎನ್ನಲಾಗಿದೆ. ಕೊಲೆ ಮಾಡಿದ ಈ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೂರು ತಿಂಗಳ ಹಿಂದೆ ಪತ್ನಿ ಕುಟುಂಬಸ್ಥರ ತೀವ್ರ ವಿರೋಧದ ನಡುವೆಯೂ ಅನೀಶ್​ ತಾನು ಪ್ರೀತಿ ಮಾಡಿದ್ದ ಹುಡುಗಿಯನ್ನ ವಿವಾಹವಾಗಿದ್ದ. ಇದು ಎರಡೂ ಕುಟುಂಬಗಳ ನಡುವೆ ತೀವ್ರ ದ್ವೇಷಕ್ಕೆ ಕಾರಣವಾಗಿತ್ತು. ಘಟನೆ ಸಂಬಂಧ ಮಧ್ಯಪ್ರವೇಶ ಮಾಡಿದ್ದ ಪೊಲೀಸರು ಎರಡೂ ಕುಟುಂಬದ ನಡುವೆ ರಾಜಿ ನಡೆಸುವ ಯತ್ನ ನಡೆಸಿದ್ದರು. ಇದಾದ ಬಳಿಕವೂ ನವದಂಪತಿಗೆ ಪತ್ನಿ ಕುಟುಂಬಸ್ಥರು ಬೆದರಿಕೆ ಹಾಕುತ್ತಲೇ ಇದ್ದರು ಎನ್ನಲಾಗಿದೆ.

ಶುಕ್ರವಾರ ಸಂಜೆ ಅನೀಶ್​ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಆತನ ಮೇಲೆ ಹರಿತವಾದ ಸಾಧನಗಳಿಂದ ಮಾರಣಾಂತಿಕ ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅನಿಶ್​ ಆಸ್ಪತ್ರೆ ಸಾಗಿಸುವ ಮಾರ್ಗಮಧ್ಯೆಯೇ ಸಾವಿಗೀಡಾಗಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...