alex Certify ಪೋಷಕರನ್ನ ರೂಮಿನಲ್ಲಿ ಕೂಡಿಟ್ಟು ಹಿಂಸೆ ಕೊಟ್ಟ ಪುತ್ರ…..! ಆಹಾರ ಸಿಗದೇ ಪ್ರಾಣ ಬಿಟ್ಟ ವೃದ್ಧ ತಂದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೋಷಕರನ್ನ ರೂಮಿನಲ್ಲಿ ಕೂಡಿಟ್ಟು ಹಿಂಸೆ ಕೊಟ್ಟ ಪುತ್ರ…..! ಆಹಾರ ಸಿಗದೇ ಪ್ರಾಣ ಬಿಟ್ಟ ವೃದ್ಧ ತಂದೆ

ವೃದ್ಧ ಪೋಷಕರನ್ನ ರೂಮಿನಲ್ಲಿ ಕೂಡಿ ಹಾಕಿ ಹಿಂಸೆ ನೀಡಿದ್ದ ಪಾಪಿ ಪುತ್ರನನ್ನ ಕೇರಳದ ಮುಂದಕಾಯಂ ಪೊಲೀಸರು ಬಂಧಿಸಿದ್ದಾರೆ.

ವೃದ್ಧ ತಂದೆ ತಾಯಿಗೆ ವೈದ್ಯಕೀಯ ಚಿಕಿತ್ಸೆ ಹಾಗೂ ಊಟವನ್ನೇ ನೀಡದ ಕಾರಣ ತಂದೆ ಸಾವನ್ನಪ್ಪಿದ್ದರೆ ತಾಯಿ ಆಸ್ಪತ್ರೆಯಲ್ಲಿ ಸಾವು – ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಪಾಪಿ ಪುತ್ರನನ್ನ ರೇಜಿ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಸೆಕ್ಷನ್​ 304 ಎ ಹಾಗೂ 4(1)ರ ಅಡಿಗಳಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಈ ರೇಜಿ ತನ್ನ ತಂದೆ ತಾಯಿಗೆ ಯಾಕೆ ಈ ಶಿಕ್ಷೆಯನ್ನ ನೀಡಿದ್ದ ಅನ್ನೋದಕ್ಕೆ ಸ್ಪಷ್ಟ ಕಾರಣ ಇನ್ನೂ ಬಯಲಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರೇಜಿ ತಂದೆ ಪೋಡಿಯಾನ್​ (80) ಹಾಗೂ ತಾಯಿ ಅಮ್ಮಿನಿ (76) ಅಸ್ವಸ್ಥ ಸ್ಥಿತಿಯಲ್ಲಿ ಆರೋಗ್ಯ ಕಾರ್ಯಕರ್ತರ ಕಣ್ಣಿಗೆ ಬಿದ್ದಿದ್ದಾರೆ ಎನ್ನಲಾಗಿದೆ. ಸ್ಥಳೀಯರು ಇವರಿಬ್ಬರಿಗೆ ಊಟ ಕೊಡುತ್ತೇವೆ ಎಂದರೂ ಬಿಡದ ರೇಜಿ, ಮನೆಗೆ ಯಾರೂ ಬರಬಾರದು ಎಂಬ ಕಾರಣಕ್ಕೆ ನಾಯಿ ಸಾಕಿದ್ದ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...