alex Certify ಪತಿ ಇಲ್ಲದ ವೇಳೆ ಪುತ್ರನ ಸಮೇತ ಪರ ಪುರುಷನೊಂದಿಗೆ ಪತ್ನಿ ಎಸ್ಕೇಪ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿ ಇಲ್ಲದ ವೇಳೆ ಪುತ್ರನ ಸಮೇತ ಪರ ಪುರುಷನೊಂದಿಗೆ ಪತ್ನಿ ಎಸ್ಕೇಪ್​..!

ವಿವಾಹಿತೆಯೊಬ್ಬಳು ತನ್ನ ಅಪ್ರಾಪ್ತ ಮಗನನ್ನ ಕರೆದುಕೊಂಡು ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯ ಜೊತೆ ಓಡಿ ಹೋದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್​​ನಲ್ಲಿ ನಡೆದಿದೆ.

ಮುಂಬೈನ ಸಾಕಿನಾಕಾ ಪ್ರದೇಶದಲ್ಲಿ ಪತಿ ಹಾಗೂ ನಾಲ್ವರು ಅಪ್ರಾಪ್ತ ಮಕ್ಕಳೊಂದಿಗೆ 32 ವರ್ಷದ ಮಹಿಳೆ ವಾಸವಿದ್ದಳು. ಮನೆಯಲ್ಲಿ ಪತಿ ಇಲ್ಲದ ವೇಳೆ ನೋಡಿಕೊಂಡು ಈಕೆ 5 ವರ್ಷದ ಮಗನ ಜೊತೆ ಪರ ಪುರುಷನ ಜೊತೆ ಪರಾರಿಯಾಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಭದ್ರತಾ ಮೇಲ್ವಿಚಾರಕನಾಗಿ ಕೆಲಸ ಮಾಡುವ ಪತಿ ಭಾನುವಾರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಪತಿ ಹಾಗೂ ಆತನ ಕೆಲ ಸಂಬಂಧಿಕರು ಸೇರಿ ಜನವರಿ 7ರಂದು ಶಿರಡಿಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಹಾಜರಾಗಿದ್ದಾರೆ. ಮನೆಯಲ್ಲಿ ಪತ್ನಿ, ಮೂವರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರ ಇದ್ದ. ಶಿರಡಿಯಿಂದ ಪತಿ ವಾಪಸ್ಸಾಗಿ ಬಂದು ನೋಡಿದ ವೇಳೆ ಹೆಂಡತಿ ಹಾಗೂ ಮಗ ಕಾಣೆಯಾಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಮಹಿಳೆ ಕಲ್ಯಾಣ್​ ತಾಲೂಕಿನ ಪರಪುರುಷನ ಜೊತೆ ಓಡಿ ಹೋದ ವಿಚಾರ ಬಳಿಕ ಬೆಳಕಿಗೆ ಬಂದಿದೆ. ಪತ್ನಿ ಹಾಗೂ ಪುತ್ರನನ್ನ ಪತ್ತೆ ಹಚ್ಚುವಲ್ಲಿ ಪತಿ ವಿಫಲರಾದ ಕಾರಣ ಕಲ್ಯಾಣ್​​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...