alex Certify ಜ್ಯೋತಿರಾದಿತ್ಯ ಸಿಂಧಿಯಾರ 4000 ಕೋಟಿ ರೂ. ಮೌಲ್ಯದ ಅರಮನೆ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜ್ಯೋತಿರಾದಿತ್ಯ ಸಿಂಧಿಯಾರ 4000 ಕೋಟಿ ರೂ. ಮೌಲ್ಯದ ಅರಮನೆ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ದೇಶದ ಶ್ರೀಮಂತ ರಾಜಕಾರಣಿಗಳಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಕೂಡ ಒಬ್ಬರು. ರಾಜಮನೆತನಕ್ಕೆ ಸೇರಿದ್ದರಿಂದಾಗಿ ಅವರಿಗೆ ಸಾಕಷ್ಟು ಆಸ್ತಿ ಇದೆ.

ಅವರ ಬಳಿ ಇರುವ ನಾಲ್ಕು ಸಾವಿರ ಕೋಟಿ ರೂಪಾಯಿ ಮೌಲ್ಯದ ಜೈ ವಿಲಾಸ್ ಅರಮನೆ ಬಲು ಅಪರೂಪದ್ದು. ಹಲವು ಸ್ವಾರಸ್ಯಗಳನ್ನು ಅದು ಹೊಂದಿದೆ.

1874ರಲ್ಲಿ ಮಹಾರಾಜರಾಗಿದ್ದ ಶ್ರೀಮಂತ್ ಜಯಾಜಿರಾವ್ ಸಿಂಧಿಯಾ ಇದನ್ನು ನಿರ್ಮಿಸಿದ್ದರು.

ಕಣ್ಮನ ಸೆಳೆಯುವ ಸುಂದರ ಅರಮನೆಯನ್ನು ವಾಸ್ತುಶಿಲ್ಪಿ ಸರ್ ಮೈಕೆಲ್ ಫಿಲೋಸ್ ವಿನ್ಯಾಸಗೊಳಿಸಿದ್ದು, ಅವರು ಇಟಾಲಿಯನ್, ಟಸ್ಕನ್ ಮತ್ತು ಕೊರಿಂಥಿಯನ್ ಶೈಲಿಯ ವಾಸ್ತುಶಿಲ್ಪದಿಂದ ಸ್ಫೂರ್ತಿ ಪಡೆದಿದ್ದು ಕಾಣಿಸುತ್ತದೆ.

ಈ ಆಸ್ಪತ್ರೆಯಲ್ಲಿ ಕೇವಲ 50 ರೂಪಾಯಿಗೆ MRI ಸ್ಕ್ಯಾನಿಂಗ್….!

ಈ ಅರಮನೆ ಬೃಹತ್ ಕೋರ್ಟ್ ಹಾಲ್ ಕೂಡಾ ಹೊಂದಿದ್ದು, 400 ಕ್ಕೂ ಹೆಚ್ಚು ಕೊಠಡಿಗಳಿವೆ. ಈಗ ಇದರ ಒಂದು ಭಾಗವನ್ನು ಇತಿಹಾಸ ತಿಳಿಸಲು ವಸ್ತು ಸಂಗ್ರಹಾಲಯವಾಗಿ ಬಳಸಲಾಗುತ್ತಿದೆ.

1240771 ಚದರ ಅಡಿ ವಿಸ್ತೀರ್ಣದಲ್ಲಿದ್ದು, 3500 ಕೆಜಿಯ ಗೊಂಚಲು ಪ್ರಮುಖ‌ ಆಕರ್ಷಣೆ. ಮೇಲ್ಚಾವಣೆಯನ್ನು ಚಿನ್ನದಿಂದ ಅಲಂಕರಿಸಲಾಗಿದೆ. ಮೇಲ್ಚಾವಣಿಯ ಬಾಳಿಕೆ ಖಾತ್ರಿ‌ ಮಾಡಿಕೊಳ್ಳಲು ಎಂಟು ಆನೆಗಳಿಂದ ಪರೀಕ್ಷಿಸಲಾಗಿತ್ತಂತೆ.

ಭವ್ಯ ಅರಮನೆಯನ್ನು ವೇಲ್ಸ್ ರಾಜಕುಮಾರ, ಕಿಂಗ್ ಎಡ್ವರ್ಡ್ VI ಗೆ ಸ್ವಾಗತ ಸೂಚಕವಾಗಿ ನಿರ್ಮಿಸಲಾಯಿತು ಮತ್ತು ಬಳಿಕ ಇದು ಸಿಂಧಿಯಾ ರಾಜವಂಶದ ನಿವಾಸವಾಗಿತ್ತು. ಮತ್ತು 1964 ರಲ್ಲಿ ಇದನ್ನು ಸಾರ್ವಜನಿಕರಿಗೆ ತೆರೆಯಲಾಯಿತು ಎಂದು ಇತಿಹಾಸದ ಪುಟಗಳು ಹೇಳುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...