alex Certify ಈ ಸುಂದರ ತಾಣದಲ್ಲಿದೆ ಮಣ್ಣು ಮತ್ತು ಕಲ್ಲಿನಿಂದಲೇ ಮಾಡಿದ ಅರಮನೆ; ಒಮ್ಮೆ ನೋಡಲೇಬೇಕಾದ ಸ್ಥಳವಿದು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಸುಂದರ ತಾಣದಲ್ಲಿದೆ ಮಣ್ಣು ಮತ್ತು ಕಲ್ಲಿನಿಂದಲೇ ಮಾಡಿದ ಅರಮನೆ; ಒಮ್ಮೆ ನೋಡಲೇಬೇಕಾದ ಸ್ಥಳವಿದು…!

ಭಾರತದ ದಕ್ಷಿಣ ತುದಿಯಲ್ಲಿರುವ ಕನ್ಯಾಕುಮಾರಿ ತಮಿಳುನಾಡಿನ ಅತ್ಯಂತ ಶಾಂತಿಯುತ ಸ್ಥಳಗಳಲ್ಲಿ ಒಂದಾಗಿದೆ. ಏಕಾಂತದಲ್ಲಿ ನೆಮ್ಮದಿ ಬಯಸುವವರು ಕನ್ಯಾಕುಮಾರಿಗೆ ಭೇಟಿ ನೀಡಲೇಬೇಕು. ಕನ್ಯಾಕುಮಾರಿಯಲ್ಲಿ ಒಂದು ಅನನ್ಯ ಅನುಭವ ಬೇಕೆಂದರೆ ಪೊತ್ಯಾಡಿ ಎಂಬ ಗ್ರಾಮಕ್ಕೆ ಭೇಟಿ ನೀಡಿ. ಇಲ್ಲಿನ ವಿಭಿನ್ನ ದೃಶ್ಯಗಳು ನಮ್ಮಲ್ಲಿ ಅತ್ಯಾನಂದವನ್ನು ಉಂಟುಮಾಡುತ್ತವೆ. ಹಳ್ಳಿಯ ಸ್ಪರ್ಶ ಮತ್ತು ಅದ್ಭುತ ಅರಮನೆಯ ನೋಟವನ್ನು ಇದು ನಮಗೆ ನೀಡುತ್ತದೆ. ನಗರದ ಗದ್ದಲದಿಂದ ದೂರವಿರಲು ಬಯಸಿದರೆ ಇದು ಹೇಳಿಮಾಡಿಸಿದಂತಹ ತಾಣ.

ತಮಿಳುನಾಡು ರಾಜ್ಯದ ಕನ್ಯಾಕುಮಾರಿ ಜಿಲ್ಲೆಯ ಪೊತ್ಯಾಡಿ ಗ್ರಾಮದಲ್ಲಿರುವ ಮುತ್ತು ನಂದಿನಿ ಅರಮನೆ, ತನ್ನ ಸಾಟಿಯಿಲ್ಲದ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಈ ಅರಮನೆಯು ತಮಿಳು, ವಯನಾಡ್ ಮತ್ತು ಚೆಟ್ಟಿನಾಡ್ ಶೈಲಿಗಳ ಸಂಯೋಜನೆಯಿಂದ ಮಾಡಲ್ಪಟ್ಟಿದೆ. ಅವರ ಸೃಜನಶೀಲತೆಯನ್ನೊಮ್ಮೆ ನೋಡಲೇಬೇಕು. ಇದು ತಮಿಳುನಾಡಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದ್ದು ನಮ್ಮನ್ನು ಬೆರಗುಗೊಳಿಸುತ್ತದೆ.

ಈ ಅರಮನೆಯು ಕಡಿದಾದ ಬೆಟ್ಟಗಳು ಮತ್ತು ಹಸಿರಿನಿಂದ ಸುತ್ತುವರಿದಿದೆ. ಅಲ್ಲಿ ಪ್ರವಾಸಿಗರ ಜನಸಂದಣಿಯಿಲ್ಲ. ಇದು ಶಾಂತಿಯುತ ಸ್ಥಳವಾಗಿದೆ. ಮುತ್ತು ನಂದಿನಿ ಅರಮನೆಯ ವಿಶೇಷತೆ ಏನೆಂದರೆ ಅದು ಪಾರಂಪರಿಕ ಆಸ್ತಿಯಲ್ಲ, ವಾಸ್ತುಶೈಲಿಯಿಂದ ಕೂಡಿದೆ.

ಹಲವು ಸ್ಥಳಗಳಿಂದ ತರಲಾದ ಸುಮಾರು 100 ವರ್ಷಗಳ ಹಳೆಯ ಕಲಾಕೃತಿಗಳು ಅರಮನೆಯಲ್ಲಿವೆ. ಕನ್ಯಾಕುಮಾರಿ, ತಿರುನಲ್ವೇಲಿ, ಮಧುರೈ ಮತ್ತು ಕಾರೈಕುಡಿಯ ಪ್ರಾಚೀನ ವಸ್ತುಗಳನ್ನು ಸಹ ಕಾಣಬಹುದು. ವಿಶೇಷವೆಂದರೆ ಮಣ್ಣು ಮತ್ತು ಕಲ್ಲಿನಿಂದ ನಿರ್ಮಿಸಲಾದ ಮುತ್ತು ನಂದಿನಿ ಅರಮನೆಯು ಪರಿಸರ ಸ್ನೇಹಿ. ಈ ಮನೆಯಲ್ಲಿ ಸುಣ್ಣ, ಕೆಂಪು ಮಣ್ಣು, ದನದ ಸಗಣಿ, ಒಣಹುಲ್ಲು ಮುಂತಾದ ವಸ್ತುಗಳಿಂದ ಮಾಡಿದ ಪ್ಲಾಸ್ಟರ್ ಹಾಗೂ ಹಳೆ ಮಣ್ಣಿನ ಮೇಲ್ಛಾವಣಿಯಿದೆ. ಬಾಗಿಲುಗಳಿಗೆ ಮರ, ಕಲ್ಲು ಮತ್ತು ಮಣ್ಣಿನ ಇಟ್ಟಿಗೆಗಳನ್ನು ಮರುಬಳಕೆ ಮಾಡಲಾಗುತ್ತದೆ. ವರ್ಣರಂಜಿತ, ಬಾಳಿಕೆ ಬರುವ ಮತ್ತು ಕೈಯಿಂದ ಮಾಡಿದ ಅತಂಗುಡಿ ಅಂಚುಗಳು ಮುತ್ತು ನಂದಿನಿ ಅರಮನೆಯ ಸೌಂದರ್ಯವನ್ನು ಹೆಚ್ಚಿಸಿವೆ.

ಈ ಅರಮನೆಯು 100 ಕ್ಕೂ ಹೆಚ್ಚು ಕಂಬಗಳು ಮತ್ತು 50 ಕಿಟಕಿಗಳನ್ನು ಹೊಂದಿದೆ. ನೈಸರ್ಗಿಕ ಬೆಳಕು, ಸೂರ್ಯನ ಕಿರಣಗಳು ಮತ್ತು ಗಾಳಿ ಪ್ರವೇಶಿಸಲು ಇವು ಅನುವು ಮಾಡಿಕೊಡುತ್ತವೆ. ಬಾಲ್ಕನಿ, ಕಾಂಕ್ರೀಟ್ ಬ್ಲಾಕ್, ಗದ್ದೆ, ಅಂಗಳ ಮತ್ತು ಸ್ವಿಂಗ್ ಈ ಅರಮನೆಯಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...