alex Certify ದಿನವೊಂದರಲ್ಲಿ ಅತಿ ಕಡಿಮೆ ಕೋವಿಡ್-19 ಪ್ರಕರಣಗಳ ವರದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿನವೊಂದರಲ್ಲಿ ಅತಿ ಕಡಿಮೆ ಕೋವಿಡ್-19 ಪ್ರಕರಣಗಳ ವರದಿ

ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿರುವ ಭಾರತದಲ್ಲಿ ಭಾನುವಾರ-ಸೋಮವಾರದ ನಡುವಿನ 24 ಗಂಟೆಗಳ ಅವಧಿಯಲ್ಲಿ 70,421 ಸೋಂಕಿನ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಕುಟುಂಬ ಮತ್ತು ಆರೋಗ್ಯ ಇಲಾಖೆ ತಿಳಿಸಿದೆ.

ಈ ಸಂಖ್ಯೆಯು ಏಪ್ರಿಲ್ 1ರಿಂದ ಇಲ್ಲಿವರೆಗೂ ದಿನವೊಂದರಲ್ಲಿ ದಾಖಲಾದ ಅತಿ ಕಡಿಮೆ ಸಂಖ್ಯೆಯಾಗಿದೆ.

“ಭಾರತವು 70,421 ಹೊಸ ಕೋವಿಡ್‌-19 ಪ್ರಕರಣಗಳನ್ನು ವರದಿ ಮಾಡಿದೆ (ಕಳೆದ 72 ದಿನಗಳಲ್ಲೇ ಅತ್ಯಂತ ಕಡಿಮೆ ಸಂಖ್ಯೆ), ಕಳೆದ 24 ಗಂಟೆಗಳಲ್ಲಿ 1,19,501 ಸೋಂಕಿತರನ್ನು ಡಿಸ್ಚಾರ್ಜ್ ಮಾಡಲಾಗಿದ್ದು, 3921 ಮಂದಿ ಮೃತಪಟ್ಟಿದ್ದಾರೆ” ಎಂದು ಕೇಂದ್ರ ಆರೋಗ್ಯ ಸಚಿವಾಲಯ ತನ್ನ ಟ್ವೀಟ್‌ನಲ್ಲಿ ತಿಳಿಸಿದೆ.

ಮೊಟ್ಟೆ ಪ್ರಿಯರಿಗೆ ಶಾಕಿಂಗ್ ನ್ಯೂಸ್

ಸದ್ಯ ದೇಶದಲ್ಲಿ ಕೋವಿಡ್‌ನ 9,73,158 ಸಕ್ರಿಯ ಪ್ರಕರಣಗಳಿದ್ದು, ಕಳೆದ 24 ಗಂಟೆಗಳಲ್ಲಿ 1,19,501 ಮಂದಿ ಚೇತರಿಸಿಕೊಂಡಿದ್ದಾರೆ. ಇಲ್ಲಿವರೆಗೂ ಕೋವಿಡ್ ಬಂದು ಚೇತರಿಸಿಕೊಂಡವರ ಸಂಖ್ಯೆಯು 2,81,62,967 ತಲುಪಿದೆ.

ಅಳಿಲು ಎಂದುಕೊಂಡು ಹತ್ತಿರಹೋದ ಬಾಲೆ ಕಣ್ಣಿಗೆ ಕಂಡದ್ದು ಜೀವಂತ ಬಾಂಬ್

ಸಾಮೂಹಿಕ ಲಸಿಕಾ ಕಾರ್ಯಕ್ರಮದಲ್ಲಿ ಇದುವರೆಗೂ 25,48,49,301 ಮಂದಿಗೆ ಇಲ್ಲಿವರೆಗೂ ಲಸಿಕೆ ಹಾಕಲಾಗಿದೆ ಎಂದ ಆರೋಗ್ಯ ಇಲಾಖೆಯ ದತ್ತಾಂಶಗಳು ತಿಳಿಸುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...