alex Certify ಅಳಿಲು ಎಂದುಕೊಂಡು ಹತ್ತಿರಹೋದ ಬಾಲೆ ಕಣ್ಣಿಗೆ ಕಂಡದ್ದು ಜೀವಂತ ಬಾಂಬ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಳಿಲು ಎಂದುಕೊಂಡು ಹತ್ತಿರಹೋದ ಬಾಲೆ ಕಣ್ಣಿಗೆ ಕಂಡದ್ದು ಜೀವಂತ ಬಾಂಬ್

ಅಮೆರಿಕದ ಐಯೋವಾ ರಾಜ್ಯದ ಎಂಟು ವರ್ಷದ ಬಾಲಕಿಯೊಬ್ಬಳು ಬೀದಿಯಲ್ಲಿ ಆಡುವ ವೇಳೆ ಅಕಸ್ಮಾತ್ ಆಗಿ ಬಾಂಬನ್ನು ಕಂಡಿದ್ದಾಳೆ. ಮೊದಲಿಗೆ ಇದನ್ನು ಅಳಿಲು ಎಂದುಕೊಂಡಿದ್ದ ಈ ಬಾಲೆ, ಹತ್ತಿರ ಹೋಗಿ ನೋಡಿದಾಗ ಅದು ಬೇರೆಯದ್ದೇ ವಸ್ತುವೆಂದು ಅರಿತುಕೊಂಡಿದ್ದಾಳೆ.

ಸಾಹಸ ಮಾಡಲು ಹೋದ ಯುವತಿಯದ್ದು ಬೇಡ ಫಜೀತಿ…!

ಟೇಪ್ ಹಾಗೂ ಕಾರ್ಡ್‌ಬೋರ್ಡ್‌ನಲ್ಲಿ ಸುತ್ತಲಾಗಿದ್ದ ಆ ವಸ್ತುವನ್ನು ಸುರಕ್ಷಿತ ಅಂತರದಿಂದ ಗಮನಿಸಿದ ಬಾಲಕಿ ಮಾಯಾ, ಈ ಬಗ್ಗೆ ತನ್ನ ತಾಯಿಗೆ ವಿಚಾರ ತಿಳಿಸಲು ಮುಂದಾಗಿದ್ದಾಳೆ.

ಮೊಸಳೆ ಬಾಯಿಯಿಂದ ಬಚಾವಾಗಿ ಬಂದಿದ್ದ ಯುವತಿ ʼಕೋಮಾʼದಿಂದ ಹೊರಕ್ಕೆ…!

ಮಾಯಾ ತಾಯಿ ಕೊಟ್ಟ ಮಾಹಿತಿ ಆಧರಿಸಿ ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿಗಳು, ಆ ವಸ್ತುವಿಗೆ ಕಾರ್ಡ್‌ಬೋರ್ಡ್ ಕವಚ ಹಾಗೂ ಫ್ಯೂಸ್‌ ಒಂದು ಇದೆ ಎಂದು ಕಂಡುಕೊಂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯ ನೆರವಿನಿಂದ ಆ ಸ್ಫೋಟಕ ವಸ್ತುವನ್ನು ನಿಷ್ಕ್ರಿಯಗೊಳಿಸಲಾಗಿದೆ.

ಸ್ಫೋಟಗೊಳ್ಳುತ್ತಲೇ ಒಂದಷ್ಟು ಡ್ಯಾಮೇಜ್ ಮಾಡುವ ರೀತಿಯಲ್ಲಿ ಬಾಂಬ್‌ ಅನ್ನು ನಿರ್ಮಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...