alex Certify ಕಳೆದ ಬಾರಿ ಕೊರೊನಾ ಸೋಂಕಿಗೊಳಗಾಗಿದ್ದ ಉದ್ಯಮಿಯಿಂದ ಮಹತ್ತರ ಕಾರ್ಯ: ಕೇವಲ 1 ರೂಪಾಯಿಗೆ ಆಕ್ಸಿಜನ್‌ ಸಿಲಿಂಡರ್‌ ವ್ಯವಸ್ಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಳೆದ ಬಾರಿ ಕೊರೊನಾ ಸೋಂಕಿಗೊಳಗಾಗಿದ್ದ ಉದ್ಯಮಿಯಿಂದ ಮಹತ್ತರ ಕಾರ್ಯ: ಕೇವಲ 1 ರೂಪಾಯಿಗೆ ಆಕ್ಸಿಜನ್‌ ಸಿಲಿಂಡರ್‌ ವ್ಯವಸ್ಥೆ

ಉತ್ತರ ಪ್ರದೇಶದಲ್ಲಿ ಡೆಡ್ಲಿ ವೈರಸ್​​ ತನ್ನ ರುದ್ರ ನರ್ತನವನ್ನ ಮುಂದುವರಿಸಿದೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಕೃತಕ ಆಮ್ಲಜನಕದ ಅಭಾವ ಉಂಟಾಗಿದೆ.

ಅಪ್ಪಿ ತಪ್ಪಿ ಎಲ್ಲಾದರೂ ಒಂದು ಆಕ್ಸಿಜನ್​ ಸಿಲಿಂಡರ್​ ಬ್ಲಾಕ್​ ಮಾರ್ಕೆಟ್​ನಲ್ಲಿ ಸಿಕ್ಕರೂ ಸಹ ಅದರ ಬೆಲೆ 30 ಸಾವಿರ ರೂಪಾಯಿಗಿಂತ ಹೆಚ್ಚಿದೆ.

ಜನರ ಈ ಕಷ್ಟವನ್ನ ಅರಿತ ಉತ್ತರ ಪ್ರದೇಶದ ಹಮಿರ್​ಪುರ ಜಿಲ್ಲೆಯ ಉದ್ಯಮಿಯೊಬ್ಬರು ಕೇವಲ 1 ರೂಪಾಯಿಗೆ ಆಕ್ಸಿಜನ್​ ಸಿಲಿಂಡರ್​ ವ್ಯವಸ್ಥೆ ಮಾಡ್ತಿದ್ದಾರೆ.

ರಿಮ್​ಝಿಮ್​ ಇಸ್ಪಾಟ್​ ಕಾರ್ಖಾನೆಯ ಮಾಲೀಕರಾಗಿರುವ ಮನೋಜ್​ ಗುಪ್ತಾ ಕೊರೊನಾ ರೋಗಿಗಳ ಸಹಾಯಕ್ಕೆ ಮುಂದಾಗಿದ್ದು ಕೇವಲ 1 ರೂಪಾಯಿ ಆಕ್ಸಿಜನ್​ ಸಿಲಿಂಡರ್​ ರಿಫಿಲ್​  ಮಾಡ್ತಿದ್ದಾರೆ. ಈಗಾಗಲೇ ಗುಪ್ತಾ 1000ಕ್ಕೂ ಹೆಚ್ಚು ಆಕ್ಸಿಜನ್​ ಸಿಲಿಂಡರ್​ಗಳನ್ನ ನೀಡಿದ್ದಾರೆ.

ಮನೋಜ್​ ಗುಪ್ತಾ ಕಳೆದ ವರ್ಷ ಕೊರೊನಾ ಮೊದಲನೇ ಅಲೆ ದೇಶದಲ್ಲಿದ್ದ ವೇಳೆ ಸೋಂಕಿಗೆ ಒಳಗಾಗಿದ್ದರು. ನಾನು ಕೊರೊನಾ ಸೋಂಕಿನ ಕಷ್ಟವನ್ನ ಅನುಭವಿಸಿದ್ದೇನೆ, ಹೀಗಾಗಿ ನಾನು ಸೋಂಕಿತರಿಗೆ ನನ್ನ ಕೈಲಾದಷ್ಟು ಸಹಾಯ ಮಾಡ್ತಿದ್ದೇನೆ ಎಂದು ಹೇಳಿದ್ರು.

ಆಕ್ಸಿಜನ್​ ಸಿಲಿಂಡರ್​ಗಳನ್ನ ರಿಫಿಲ್​ ಮಾಡಿಸಲು ಕೋವಿಡ್​ ರೋಗಿಯ ಕುಟುಂಬಸ್ಥರು ಆರ್​ಟಿ ಪಿಸಿಆರ್​​​ ವರದಿ ಹಾಗೂ ಆಧಾರ್​ ಕಾರ್ಡ್ ತೋರಿಸೋದು ಅನಿವಾರ್ಯವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...