alex Certify ಕೊರೊನಾ ಸಂಕಷ್ಟದ ನಡುವೆಯೂ ಶುರುವಾಯ್ತು ‘ರೆಸಾರ್ಟ್’ ರಾಜಕಾರಣ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸಂಕಷ್ಟದ ನಡುವೆಯೂ ಶುರುವಾಯ್ತು ‘ರೆಸಾರ್ಟ್’ ರಾಜಕಾರಣ…!

ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್ಡೌನ್ ಜಾರಿಗೊಳಿಸಿದ್ದರೂ ಸಹ ರಾಜಕೀಯ ಚಟುವಟಿಕೆಗಳು ನಿಂತಿಲ್ಲ. ಅಧಿಕಾರದ ಸಲುವಾಗಿ ತಂತ್ರ-ಪ್ರತಿತಂತ್ರ ಮುಂದುವರಿಯುತ್ತಲೇ ಇವೆ.

ರಾಜ್ಯಸಭಾ ಚುನಾವಣೆ ಘೋಷಣೆಯಾಗಿರುವುದರಿಂದ ಈಗ ರಾಜಕೀಯ ಚಟುವಟಿಕೆ ಮತ್ತಷ್ಟು ಗರಿಗೆದರಿದ್ದು, ಗುಜರಾತಿನಲ್ಲಿ ಮೂವರು ‘ಕೈ’ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ಆಡಳಿತರೂಢ ಬಿಜೆಪಿಗೆ ಅನುಕೂಲಕರವಾಗಲಿದೆ ಎನ್ನಲಾಗಿದ್ದು, ಈ ಬೆಳವಣಿಗೆಯಿಂದ ಕಾಂಗ್ರೆಸ್ ಪಕ್ಷ ಬೆಚ್ಚಿಬಿದ್ದಿದೆ.

ಇನ್ನಷ್ಟು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ರಕ್ಷಣಾ ತಂತ್ರಕ್ಕೆ ಮೊರೆ ಹೋಗಿರುವ ಗುಜರಾತಿನ ಕಾಂಗ್ರೆಸ್ ಘಟಕ, ತನ್ನ 21 ಶಾಸಕರನ್ನು ಶನಿವಾರ ರಾತ್ರಿಯೇ ರಾಜಸ್ಥಾನದ ಅಬು ರಸ್ತೆಯ ಅಂಬಾಜಿ ಟೆಂಪಲ್ ಸಮೀಪದ ಖಾಸಗಿ ರೆಸಾರ್ಟ್ ಗೆ ಕಳುಹಿಸಿದೆ. ಇನ್ನೂ ಮೂರ್ನಾಲ್ಕು ದಿನಗಳ ಕಾಲ ಈ ಶಾಸಕರುಗಳು ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...