alex Certify ವಧುವಿನ ಫೋಟೋ ಕ್ಲಿಕ್ಕಿಸಲು ಹೋಗಿ ಗೂಸಾ ತಿಂದ ಫೋಟೋಗ್ರಾಫರ್.​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಧುವಿನ ಫೋಟೋ ಕ್ಲಿಕ್ಕಿಸಲು ಹೋಗಿ ಗೂಸಾ ತಿಂದ ಫೋಟೋಗ್ರಾಫರ್.​..!

ಮದುವೆ ಅಂತಾ ಅಂದಮೇಲೆ ಅಲ್ಲಿ ಕ್ಯಾಮೆರಾಮನ್​ ಇರ್ಲಿಲ್ಲ ಅಂದರೆ ಹೇಗೆ ಹೇಳಿ..? ಮದುವೆ ಮನೇಲಿ ವಧು ವರರಷ್ಟೇ ಪ್ರಾಮುಖ್ಯತೆ ಫೋಟೋಗ್ರಾಫರ್ಸ್​ಗೂ ಇರುತ್ತೆ. ಮದುವೆಯ ಸುಂದರ ಕ್ಷಣಗಳ ನೆನಪಿನ ಬುತ್ತಿಯನ್ನ ಕಟ್ಟಿಕೊಡುವ ಜವಾಬ್ದಾರಿ ಇವರ ಮೇಲೆ ಇರುತ್ತೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಡಿಯೋವೊಂದರಲ್ಲಿ ವಧುವಿನ ಫೋಟೋವನ್ನ ಕ್ಲಿಕ್ಕಿಸಲು ಹೋದ ಕ್ಯಾಮರಾಮನ್​ ವರನ ಬಳಿ ಧರ್ಮದೇಟನ್ನ ತಿಂದಿದ್ದಾನೆ.

ಮಂಟಪದಲ್ಲಿ ಫೋಟೋ ಕ್ಲಿಕ್ಕಿಸುತ್ತಿದ್ದ ಕ್ಯಾಮರಾಮನ್​ ವಧುವಿನ ಹತ್ತಿರಕ್ಕೆ ಹೋಗಿದ್ದಾನೆ. ಫೋಟೋ ತೆಗೆಯೋದ್ರಲ್ಲಿ ಕ್ಯಾಮರಾಮನ್​ ಮಗ್ನನಾಗಿದ್ರೆ ಕೋಪಗೊಂಡ ವರ ಮಾತ್ರ ಫೋಟೋಗ್ರಾಫರ್​ಗೆ ಗೂಸಾ ನೀಡಿದ್ದಾನೆ. ಇದನ್ನ ನೋಡಿದ ವಧು ಬಿದ್ದು ಬಿದ್ದು ನಕ್ಕಿದ್ದಾಳೆ.

ಗೆಳೆಯನ ಆರತಕ್ಷತೆ ಕಾರ್ಯಕ್ರಮಕ್ಕೆ ವಿಚಿತ್ರ ಉಡುಗೊರೆ ನೀಡಿ ಸುದ್ದಿಯಾದ ಸ್ನೇಹಿತರು….!

ಈ ವಿಡಿಯೋ ನೋಡಿದ ನೆಟ್ಟಿಗರಲ್ಲಿ ಅನೇಕರು ಇದು ಬಹುಶಃ ಪೂರ್ವನಿಯೋಜಿತ ಕಾಮಿಡಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ವಧು ಪರಿಸ್ಥಿತಿಯನ್ನ ಚೆನ್ನಾಗಿ ನಿಭಾಯಿಸುವ ಮೂಲಕ ಫೋಟೋಗ್ರಾಫರ್​ ಜೀವ ಕಾಪಾಡಿದ್ದಾಳೆ ಎಂದು ಹೇಳ್ತಿದ್ದಾರೆ.

— Renuka Mohan (@Ease2Ease) February 5, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...