alex Certify ಗೆಳೆಯನ ಆರತಕ್ಷತೆ ಕಾರ್ಯಕ್ರಮಕ್ಕೆ ವಿಚಿತ್ರ ಉಡುಗೊರೆ ನೀಡಿ ಸುದ್ದಿಯಾದ ಸ್ನೇಹಿತರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೆಳೆಯನ ಆರತಕ್ಷತೆ ಕಾರ್ಯಕ್ರಮಕ್ಕೆ ವಿಚಿತ್ರ ಉಡುಗೊರೆ ನೀಡಿ ಸುದ್ದಿಯಾದ ಸ್ನೇಹಿತರು….!

ದೇಶದಲ್ಲಿ ಪೆಟ್ರೋಲ್​ ದರ ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಇರೋ ವಿಚಾರ ಎಲ್ಲರಿಗೂ ತಿಳಿದೇ ಇದೆ. ಹೀಗಾಗಿ ಓಡಿಶಾದಲ್ಲಿ ಸ್ನೇಹಿತರ ಗುಂಪೊಂದು ತನ್ನ ಗೆಳೆಯನ ಮದುವೆಗೆ ಪೆಟ್ರೋಲ್​ನ್ನೇ ಉಡುಗೊರೆಯಾಗಿ ನೀಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ.

ಜರ್ಸುಗುಡಾ ಜಿಲ್ಲೆಯ ದೇಬಾಶಿಶ್​ ಪಟ್ನಾಯಕ್​ ತಮ್ಮ ಆರತಕ್ಷತೆ ದಿನದಂದು ಸ್ನೇಹಿತರು ನೀಡಿದ ಗಿಫ್ಟ್ ನೋಡಿ ಶಾಕ್​ ಆಗಿದ್ದಾರೆ. ಆರತಕ್ಷತೆ ಕಾರ್ಯಕ್ರಮದಲ್ಲಿ ಅತಿಥಿಗಳ ಜೊತೆ ಫೋಟೋ ತೆಗೆಸಿಕೊಳ್ಳೋದ್ರಲ್ಲಿ ಬ್ಯುಸಿಯಾಗಿದ್ದ ಪಟ್ನಾಯಕ್​ ದಂಪತಿ ಸ್ನೇಹಿತರು ಮಂಟಪಕ್ಕೆ ಒಂದು ಕ್ಯಾನ್ ಪೆಟ್ರೋಲ್​ ತಂದಿದ್ದನ್ನ ಕಂಡು ಒಮ್ಮೆ ಆಶ್ಚರ್ಯಚಕಿತರಾದ್ರು.

ಆದರೆ ಬಳಿಕ ಇದನ್ನೇ ಗಿಫ್ಟ್ ರೂಪದಲ್ಲಿ ನೀಡಿದ ಸ್ನೇಹಿತರು ಪೆಟ್ರೋಲ್​ ಬಹಳ ದುಬಾರಿಯಾಗಿದೆ ಎಂದು ಕ್ಯಾನ್​ ಮೇಲೆ ಬರೆದಿದ್ದಾರೆ. ಆರತಕ್ಷತೆ ಕಾರ್ಯಕ್ರಮಕ್ಕೆ ಬಂದ ಪ್ರತಿಯೊಬ್ಬರು ಈ ವಿಚಿತ್ರ ಗಿಫ್ಟ್ ಕಂಡು ನಗೆಯಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...