alex Certify ಮನಕಲಕುವಂತಿದೆ ʼಬಡತನʼವನ್ನು ಬಿಂಬಿಸುವ ಈ ಚಿತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಕಲಕುವಂತಿದೆ ʼಬಡತನʼವನ್ನು ಬಿಂಬಿಸುವ ಈ ಚಿತ್ರ

ದೇಶದ ಅತ್ಯಂತ ಕ್ರೂರ ಸಮಸ್ಯೆಗಳಲ್ಲಿ ಒಂದಾದ ಬಡತನವನ್ನು ಬಿಂಬಿಸುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಮಹಿಳೆಯೊಬ್ಬರು ತಮ್ಮ ಮಗುವನ್ನು ಕಂಕುಳದಲ್ಲಿ ಎತ್ತಿಕೊಂಡು ಮದುವೆ ಸಮಾರಂಭದ ಮೆರವಣಿಗೆಯಲ್ಲಿ ವರನಿಗೆ ಬೆಳಕು ಹಿಡಿಯುವ ಕೆಲಸ ಮಾಡುತ್ತಿರುವ ಮನಕಲಕುವ ಪರಿಸ್ಥಿತಿ ನೆಟ್ಟಿಗರನ್ನು ಬಹಳ ಕಾಡುತ್ತಿದೆ.

ಈ ಚಿತ್ರವನ್ನು ಶೇರ್‌ ಮಾಡಿಕೊಂಡಿರುವ ಉದ್ಯಮಿ ಹರ್ಷ ಗೋಯೆಂಕಾ ಈ ವಿಚಾರಕ್ಕೆ ಸಾಕಷ್ಟು ಟೀಕೆಗೆ ಗ್ರಾಸವಾಗಿದ್ದಾರೆ. ಬಡತನವನ್ನು ವೈಭವೀಕರಿಸುವ ಕೆಲಸವನ್ನು ಈ ಪೋಸ್ಟ್‌ನಲ್ಲಿ ಸಿರಿವಂತ ಉದ್ಯಮಿ ಗೋಯೆಂಕಾ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.

ಬೆಂಗಳೂರಲ್ಲಿ ಕಿಡಿಗೇಡಿಗಳ ಅಟ್ಟಹಾಸ: 15 ಕಾರ್ ಗಳ ಗಾಜು ಜಖಂ

“ಆಕೆಯ ಧೈರ್ಯವನ್ನು ಮೆಚ್ಚಿಕೊಳ್ಳುವ ಬದಲಿಗೆ, ಆಕೆಗೆ ಇಂಥ ಪರಿಸ್ಥಿತಿ ಬಂದಿದೆಯಲ್ಲಾ ಎಂದು ನಮಗೆ ನಮ್ಮ ಮೇಲೇ ನಾಚಿಕೆಯಾಗುತ್ತಿದೆ” ಎಂದು ಟ್ವಿಟರ್‌ ಬಳಕೆದಾರರೊಬ್ಬರು ಈ ಟ್ವೀಟ್‌ಗೆ ಕಾಮೆಂಟ್ ಮಾಡಿದ್ದಾರೆ. “ಬಡತನದ ವೈಭವೀಕರಣ ಮಾಡುವುದನ್ನು ಬಿಡಿ…!” ಎಂದು ಮತ್ತೊಬ್ಬರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...