alex Certify ತನ್ನ ಕೊಲೆಯ ದೃಶ್ಯವನ್ನ ತಾನೇ ಚಿತ್ರಿಸಿಕೊಂಡ ಅರಣ್ಯ ಇಲಾಖೆ ಸಿಬ್ಬಂದಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ಕೊಲೆಯ ದೃಶ್ಯವನ್ನ ತಾನೇ ಚಿತ್ರಿಸಿಕೊಂಡ ಅರಣ್ಯ ಇಲಾಖೆ ಸಿಬ್ಬಂದಿ….!

ಕಾಡುಗಳ್ಳರ ವಿರುದ್ಧ ಸಾಕ್ಷ್ಯ ಸಂಗ್ರಹಿಸುವ ಸಲುವಾಗಿ ಅತ್ಯಂತ ವೇಗವಾಗಿ ಬೈಕ್​ ಚಲಾಯಿಸಿ ಕಾಡುಗಳ್ಳರನ್ನ ಬೆನ್ನಟ್ಟಿದ ಅರಣ್ಯ ಸಿಬ್ಬಂದಿ ತಮ್ಮ ಸಾವಿನ ದೃಶ್ಯವನ್ನ ತಾವೇ ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಂಡ ದುರಂತ ಘಟನೆ ಮಧ್ಯ ಪ್ರದೇಶದ ದೇವಾಸ್​ ಜಿಲ್ಲೆಯಲ್ಲಿ ನಡೆದಿದೆ.

58 ವರ್ಷದ ಸಾಹಸಿ ಅರಣ್ಯ ಸಿಬ್ಬಂದಿ ಮದನ್​ ಲಾಲ್​ ವರ್ಮಾ, ಮರಗಳ್ಳರು ಬಂದೂಕನ್ನ ಹೊರ ತೆಗೆಯುತ್ತಿರೋದನ್ನ ನೋಡಿ ಸಾಕ್ಷ್ಯಕ್ಕಾಗಿ ಮೊಬೈಲ್​ ಕ್ಯಾಮರಾದಲ್ಲಿ ಚಿತ್ರೀಕರಣ ಆರಂಭಿಸಿದ್ದರು. 66 ಸೆಕೆಂಡ್​ನ ವಿಡಿಯೋದಲ್ಲಿ ಅಪರಿಚಿತ ಧ್ವನಿಯೊಂದು ಗೋಲಿ ಚಲಾ ಗೋಲಿ ಚಲಾ ಎಂದು ಹೇಳೋದನ್ನ ಕೇಳಬಹುದಾಗಿದೆ.

ಇದಾದ ಕೆಲವೇ ಕ್ಷಣಗಳಲ್ಲಿ ಗುಂಡೇಟು ಕೇಳಿ ಬರುತ್ತದೆ. ಕ್ಯಾಮರಾ ಮದನ್​ ಲಾಲ್​ ಕೈಯಿಂದ ಜಾರಿ ಬೀಳುವವರೆಗೂ ಅವರ ಸಾವಿನ ಅಂತಿಮ ಕ್ಷಣಗಳನ್ನ ಚಿತ್ರೀಕರಿಸಿದೆ.

ರತ್ನಪುರದ ಬೀಟ್​ ಗಾರ್ಡ್​ ಆಗಿದ್ದ ವರ್ಮಾ ಶಂಕಿತರ ಕೈಯಲ್ಲಿ ಆಯುಧಗಳಿರೋದು ಗೊತ್ತಿದ್ದರೂ ಸಹ ಧೈರ್ಯದಿಂದ ಮುನ್ನುಗ್ಗಿ ಸಾಹಸ ತೋರಿದ್ದಾರೆ ಎಂದು ದೇವಾಸ್​ ಡಿಎಫ್​ಒ ಎನ್​. ಮಿಶ್ರಾ ಹೇಳಿದ್ದಾರೆ.

ವರ್ಮಾ ಕೆಲ ದಿನಗಳ ಹಿಂದಷ್ಟೇ ಮೊಮ್ಮಗು ಜನನದ ಬಳಿಕ ಅಜ್ಜನಾಗಿ ಬಡ್ತಿ ಪಡೆದಿದ್ದರು. ಕೇವಲ ಮೂರು ದಿನಗಳ ಹಿಂದಷ್ಟೇ ತವರೂರು ಉಜ್ಜಯಿನಿಯಿಂದ ಕರ್ತವ್ಯಕ್ಕೆ ಮರಳಿದ್ದರು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...