alex Certify 62 ಕಿಮೀ ಮ್ಯಾರಾಥಾನ್ ಓಡಿ 62 ನೇ ಹುಟ್ಟುಹಬ್ಬ ಆಚರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

62 ಕಿಮೀ ಮ್ಯಾರಾಥಾನ್ ಓಡಿ 62 ನೇ ಹುಟ್ಟುಹಬ್ಬ ಆಚರಣೆ

Flying Sandhu': Man Celebrates 62nd Birthday by Running 62.4 Kms, Proves Age is Just a Number

ಬಹುತೇಕ ಯುವಕರು ತಂತಮ್ಮ ವಾಹನಗಳನ್ನು ಬಿಟ್ಟು ಒಂದಷ್ಟು ದೂರ ನಡೆಯಲೇ ಪರದಾಡುತ್ತಿರುವಾಗ ನಮ್ಮ ನಡುವೆಯೇ ಸಾಕಷ್ಟು ಹಿರಿಯ ಮಂದಿ ತಮ್ಮ ಫಿಟ್ನೆಸ್‌ ನಿಂದ ಹುಬ್ಬೇರುವಂತೆ ಮಾಡುತ್ತಿರುವ ಅನೇಕ ನಿದರ್ಶನಗಳನ್ನು ಕಂಡಿದ್ದೇವೆ.

ತಮ್ಮ 62ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಜಸ್ಮೇರ್‌ ಸಿಂಗ್ ಸಂಧು, 62.4 ಕಿಮೀ ಮ್ಯಾರಾಥಾನ್‌ ಓಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಶಾರ್ಟ್ ಹಾಗೂ ಟೀ-ಶರ್ಟ್‌ನಲ್ಲಿ ಯಾವುದೇ ಪ್ರಯಾಸವಿಲ್ಲದೇ ಆರಾಮವಾಗಿ ಓಡುತ್ತಿರುವ ತಮ್ಮ ಚಿತ್ರಗಳನ್ನು ಸಂಧು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಫಿಟ್ನೆಸ್ ಟ್ರಾಕರ್ ‌ನ ಸ್ಕ್ರೀನ್‌ಶಾಟ್‌ ಶೇರ್‌ ಮಾಡಿಕೊಂಡಿರುವ ಸಂಧು, ತಮಗೆ ಈ ಮ್ಯಾರಾಥಾನ್‌ ಓಡಿ ಮುಗಿಸಲು 7 ಗಂಟೆ 32 ನಿಮಿಷಗಳು ಹಿಡಿದಿವೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...