alex Certify ಪೊಲೀಸರ ಕಾರ್ಯ ಕಂಡು ಭಾವುಕರಾದ ಹಿರಿಯ ಜೀವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸರ ಕಾರ್ಯ ಕಂಡು ಭಾವುಕರಾದ ಹಿರಿಯ ಜೀವ

ಹರ್ಯಾಣ: ಲಾಕ್ ಡೌನ್ ನಿಂದಾಗಿ ಒಬ್ಬರೇ ಮನೆಯಲ್ಲಿದ್ದ ಕಿರಣ್ ಪುರಿ ಎಂಬ ಹಿರಿಯ ವ್ಯಕ್ತಿಯ ಹುಟ್ಟಿದ ದಿನವನ್ನು ಪಂಚಕುಲಾ ಪೊಲೀಸ್ ಠಾಣೆ ಸಿಬ್ಬಂದಿ ಆಚರಿಸಿದ್ದಾರೆ.

ಪೊಲೀಸ್ ಸಿಬ್ಬಂದಿ ಕೇಕ್ ನೊಂದಿಗೆ ಕಿರಣ್ ಅವರ ಮನೆಯ ಬಳಿ ತಲುಪಿದಾಗ ಅವರು ಸ್ವಲ್ಪ ಗಾಬರಿಗೊಂಡು, “ನನ್ನ ಹೆಸರು ಕಿರಣ್ ಪುರಿ, ನಾನು ಹಿರಿಯ ನಾಗರಿಕ ಇಲ್ಲಿ ಒಬ್ಬನೇ ವಾಸಿಸುತ್ತೇನೆ” ಎಂದು ಹೇಳುತ್ತ ಹೊರಗೆ ಬರುತ್ತಾರೆ. ನಂತರ ಪೊಲೀಸರು ಹ್ಯಾಪಿ ಬರ್ತಡೇ…..ಎಂದು ಹಾಡಿನೊಂದಿಗೆ ಅವರಿಗೆ ಕೇಕ್ ಅನ್ನು ಕೊಡುತ್ತಾರೆ. ಕಿರಣ್ ಅವರು ಖುಷಿಯಿಂದ ಕಣ್ಣೀರು ಒರೆಸಿಕೊಂಡು ಕೇಕ್ ಕಟ್ ಮಾಡುತ್ತಾರೆ.

ಅಳಬೇಡಿ ಸರ್ ನಾವು ನಿಮ್ಮ ಮನೆಯವರಿದ್ದಂತೆ ಎಂದು ಪೊಲೀಸರು ಹೇಳಿ ಕಿರಣ್ ಅವರನ್ನು ಸಮಾಧಾನ ಮಾಡಿದ್ದಾರೆ. ಈಗ ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ನೋಡುಗರನ್ನು ಮುದಗೊಳಿಸಿದೆ. ಪಂಚಕುಲಾ ಕಮಿಷನರ್ ಟ್ವಿಟರ್ ಖಾತೆಯಲ್ಲಿ ಮತ್ತು ಐಪಿಎಸ್ ಅಧಿಕಾರಿ ಪಂಕಜ್ ನೈನ್ ಅವರು ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋ 4 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಪಡೆದಿದೆ. ಪೊಲೀಸರ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...