alex Certify PUBG ಆಡಲು ಕಾಶ್ಮೀರ ಬಿಟ್ಟು ಪಾಕಿಸ್ತಾನಕ್ಕೆ ತೆರಳಿದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

PUBG ಆಡಲು ಕಾಶ್ಮೀರ ಬಿಟ್ಟು ಪಾಕಿಸ್ತಾನಕ್ಕೆ ತೆರಳಿದ ಭೂಪ…!

ಪ್ರಸಿದ್ಧ ಇ ಗೇಮ್ ಪಬ್ ಜಿಯನ್ನು ಭಾರತದಲ್ಲಿ ನಿಷೇಧ ಮಾಡಲಾಗಿದೆ. ಆದರೆ, ಪಬ್ ಜೀ ಆಡುವ ಸಲುವಾಗಿಯೇ ಭಾರತದ ಯುವಕನೊಬ್ಬ ಗಡಿದಾಟಿ ಪಾಕಿಸ್ತಾನಕ್ಕೆ ತೆರಳಿದ ಘಟನೆ ನಡೆದಿದೆ.

ಕಾಶ್ಮೀರದ ಜಿಯಾನ್ ಶಫೀಕ್ ಎಂಬ 18 ವರ್ಷದ ಯುವಕ ಪಾಕಿಸ್ತಾನಕ್ಕೆ ತೆರಳಿ ಪಬ್ ಜಿ ಆಟ ಮುಂದುವರಿಸಿದಾತ.

ಪಬ್ ಜಿ ನಡೆಸುತ್ತಿರುವ ವರ್ಡ್ ಲೀಗ್ ಚಾಂಪಿಯನ್ ಶಿಪ್ ಗೆ ಶಫೀಕ್ ನೇತೃತ್ವದ ಇ ಸ್ಪೋರ್ಟ್ಸ್ ತಂಡ ಆಯ್ಕೆಯಾಗಿದೆ. ಗೆದ್ದ ತಂಡಕ್ಕೆ 20 ಲಕ್ಷ ರೂ.‌ ಬಹುಮಾನವಿದೆ. ಆದರೆ, ಭಾರತದಲ್ಲಿ ಆಟ ನಿಷೇಧ ಮಾಡಿದ್ದರಿಂದ ಸಮಸ್ಯೆ ಉಂಟಾಗಿತ್ತು.

ಜಿಯಾನ್ ಶಫೀಕ್ ಈಗ ಪಬ್ ಜಿ ಆಡುವ ಸಲುವಾಗಿಯೇ ಪಾಕಿಸ್ತಾನಕ್ಕೆ ತೆರಳಿದ್ದಾನೆ. ಆ ದೇಶದಿಂದ ಕಳೆದ ವರ್ಷ ವರ್ಡ್ ಚಾಂಪಿಯನ್ ಶಿಪ್ ನಲ್ಲಿ ಆಡಿದ್ದವರನ್ನು ತನ್ನ ತಂಡದಲ್ಲಿ ಸೇರಿಸಿಕೊಂಡಿದ್ದಾನೆ. ಚಾಂಪಿಯನ್ ಶಿಪ್ ಗೆಲ್ಲುವ ತವಕದಲ್ಲಿದ್ದಾನೆ.

“ಭಾರತ -ಪಾಕಿಸ್ತಾನ ನಡುವೆ ವೈರತ್ವವಿದೆ. ನಾನು ಅಲ್ಲಿ ಹೋಗುವುದರಿಂದ ದೊಡ್ಡ ಗಲಾಟೆ ಆಗಬಹುದು ಎಂಬ ಆತಂಕವಿತ್ತು. ಆದರೆ, ಎರಡೂ ದೇಶದಿಂದ ಬೆಂಬಲ ಸಿಕ್ಕಿದ್ದು, ಸಂತೋಷ ನೀಡಿದೆ” ಎಂದು ಶಫೀಕ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...