alex Certify ಕಟ್ಟಿಂಗ್‌ ಮಾಡಿಕೊಳ್ಳುವ ಸುಲಭ‌ ವಿಧಾನವನ್ನು ತೋರಿಸಿದ್ದಾರೆ ಈ ಅಂಕಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಟ್ಟಿಂಗ್‌ ಮಾಡಿಕೊಳ್ಳುವ ಸುಲಭ‌ ವಿಧಾನವನ್ನು ತೋರಿಸಿದ್ದಾರೆ ಈ ಅಂಕಲ್

ಕರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಲಾಕ್ಡೌನ್ ಜಾರಿಯಲ್ಲಿದೆ. ಈ ವೇಳೆ ಕ್ಷೌರ, ಹೇರ್ ಡೈ ಸಮಸ್ಯೆ ಜನರನ್ನು ವಿಪರೀತವಾಗಿ ಕಾಡಿದೆ. ಅನೇಕರು ತಮ್ಮ ಕುಟುಂಬದವರ ಸಹಾಯದಿಂದ ಅಥವಾ ಸ್ವ ಪ್ರಯತ್ನದಿಂದ ಕ್ಷೌರ ಮಾಡಿಕೊಂಡಿದ್ದಾರೆ. ಅದರ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.

ಈ ನಡುವೆ ಸಾಮಾಜಿಕ ಜಾಲತಾಣ ಒಂದರಲ್ಲಿ ತಲೆ ಕೂದಲು ಕತ್ತರಿಸಿಕೊಳ್ಳುವ ಸುಲಭ ದಾರಿಯನ್ನು ತೋರಿಸಿವ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ವ್ಯಕ್ತಿಯೊಬ್ಬರು ಬಟ್ಟೆಗಳ ಮೇಲೆ ಕೂದಲು ಬೀಳದಂತೆ ಹೇಗೆ ಪೇಪರ್ ಬಳಸಬಹುದೆಂದು ವಿಡಿಯೋದಲ್ಲಿ ತೋರಿಸಿದ್ದಾರೆ.

ಜೊತೆಗೆ ಬಾಚಣಿಗೆ, ಕ್ಲಿಪ್ ಹಾಗೂ ಬ್ಲೇಡ್ ಸಹಾಯದಿಂದ ಸುಲಭವಾಗಿ ಕಟಿಂಗ್ ಮಾಡಿಕೊಳ್ಳುವ ವಿಧಾನವೊಂದನ್ನು ತೋರಿಸಿಕೊಟ್ಟಿದ್ದಾರೆ.‌ ಪೇಪರ್ ಹಾಗೂ ಬ್ಲೇಡ್- ಕ್ಲಿಪ್ಸ್ ಬಳಕೆಯಿಂದ ಸುಲಭವಾಗಿ ಕಟಿಂಗ್ ಮಾಡಿಕೊಳ್ಳುವ ತಂತ್ರವನ್ನು ನೀಡಿರುವುದು ಸಾಕಷ್ಟು ಸದ್ದು ಮಾಡಿದೆ. ನೂರಾರು ಮಂದಿ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...