alex Certify ಕಸ ತುಂಬುವ ಕಷ್ಟವನ್ನು ಬಿಂಬಿಸುತ್ತೆ ಈ ತಮಾಷೆ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಸ ತುಂಬುವ ಕಷ್ಟವನ್ನು ಬಿಂಬಿಸುತ್ತೆ ಈ ತಮಾಷೆ ವಿಡಿಯೋ

Desi Man Shares 'Real Struggle' of Doing 'Jhaadu' in Lockdown. We ...

ಕೊರೊನಾ ವೈರಸ್‌ನಿಂದ ಬಚಾವಾಗಲು ಮನೆಯಲ್ಲೇ ಇದ್ದ ಹಲವರು ಮನೆಯ ಸ್ವಚ್ಛತೆಯ ಕಷ್ಟಗಳನ್ನು ಅರಿಯುತ್ತಿದ್ದಾರೆ. ಕಸಬರಿಗೆಯಿಂದ ಗುಡಿಸಿದ ಕಸವನ್ನು ಸ್ವಲ್ಪವೂ ಬಿಡದೇ ಮೊರದಲ್ಲಿ ತುಂಬುವುದು ಎಷ್ಟು ಕಷ್ಟದ ವಿಷಯ ಎಂಬುದು ಬಹುತೇಕ ಪುರುಷರಿಗೆ ಅರ್ಥವಾಗಿದೆ. ಈ ಸಂಬಂಧದ ಹಾಸ್ಯಮಯ ವಿಡಿಯೋವೊಂದು ಈಗ ಸಖತ್ ವೈರಲ್ ಆಗಿದೆ.

ವೆಂಕಟಸುಬ್ರಮಣಿಯನ್ ಎಂಬ ವ್ಯಕ್ತಿ ತಮ್ಮ ಟ್ವಿಟರ್‌ನಲ್ಲಿ ವಿಡಿಯೋವನ್ನು ಆಗಸ್ಟ್ 13 ರಂದು ಶೇರ್ ಮಾಡಿದ್ದು, ನಾಲ್ಕೇ ದಿನದಲ್ಲಿ ಅದು 978 ಸಾವಿರ ವೀಕ್ಷಣೆ ಪಡೆದಿದೆ. 67 ಸಾವಿರ ಲೈಕ್‌ಗಳು ಬಂದಿವೆ.

ವ್ಯಕ್ತಿ ಮನೆಯ ಜಗುಲಿಯಲ್ಲಿ ಬಿದ್ದ ಕಸವನ್ನು ಗುಡಿಸಿ ಮೊರದಲ್ಲಿ ತುಂಬಲು ಪ್ರಯತ್ನಿಸುತ್ತಾರೆ. ಎಷ್ಟಾದರೂ ಮತ್ತೂ ಸ್ವಲ್ಪ ಉಳಿದು ಬಿಡುತ್ತದೆ. ಅವರು ಕಸ ತುಂಬುತ್ತ ತುಂಬುತ್ತ, ಡೊನಾಲ್ಡ್ ಟ್ರಂಪ್ ಭಾಷಣ ಸಭೆ, ಬಾಹುಬಲಿ-2 ಚಿತ್ರ ಪ್ರದರ್ಶನದ ಥಿಯೇಟರ್ ಹೀಗೆ ಎಲ್ಲೆಲ್ಲ ಓಡಾಡುತ್ತಾರೆ. ಅಂತೂ ಒಂದು ಸ್ವಲ್ಪವೂ ಕಸವನ್ನೂ ಬಿಡದೇ ಮೊರದಲ್ಲಿ ತುಂಬಿ ಎದ್ದು ನೋಡಿದಾಗ ಅವರು ದಟ್ಟಡವಿಯ ಗುಹೆಯೊಳಕ್ಕೆ ಬಂದಿರುತ್ತಾರೆ. ಕಸ ತುಂಬುವ ಕಷ್ಟದ ಕುರಿತ ಕಲ್ಪನೆಯನ್ನು ರಂಜಿತವಾಗಿ ವಿವರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...