alex Certify ನಿರ್ಲಕ್ಷ್ಯ ಮಾಡಿದ ಗೆಳತಿಯನ್ನು ಬೆದರಿಸಲು ಗುಂಡು ಹಾರಿಸಿದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿರ್ಲಕ್ಷ್ಯ ಮಾಡಿದ ಗೆಳತಿಯನ್ನು ಬೆದರಿಸಲು ಗುಂಡು ಹಾರಿಸಿದ ಭೂಪ…!

ಪ್ರಾಪರ್ಟಿ ಡೀಲರ್​ ಆಗಿ ಉದ್ಯಮ ನಡೆಸುತ್ತಿದ್ದ 32 ವರ್ಷದ ವ್ಯಕ್ತಿಯೊಬ್ಬ ತನ್ನ 21 ವರ್ಷದ ಮಾಜಿ ಪ್ರೇಯಸಿಯನ್ನ ಬೆದರಿಸೋಕೆ ಗುಂಡು ಹಾರಿಸಿದ ಹಿನ್ನೆಲೆ ಪೊಲೀಸರು ಆತನನ್ನ ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನ ಸುರೇಶ್ ಎಂದು ಗುರುತಿಸಲಾಗಿದೆ. ಈತ ನಿವೃತ್ತ ಆರ್ಮಿ ಅಧಿಕಾರಿಯ ಪುತ್ರನಾಗಿದ್ದಾನೆ. ಸುರೇಶ್​ಗೆ ತನ್ನ ಪರವಾನಿಗಿ ಹೊಂದಿರುವ ಪಿಸ್ತೂಲ್​ನ್ನು ನೀಡಿದ ಕಾರಣ 45 ವರ್ಷದ ಪವನ್​​ನನ್ನೂ ಬಂಧಿಸಲಾಗಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಪೊಲೀಸ್​ ಅಧಿಕಾರಿ ಊರ್ವಿಜಾ ಘೋಯಲ್​​, ಯುವತಿ ಕಳೆದ ಕೆಲ ದಿನಗಳಿಂದ ಆರೋಪಿಯನ್ನ ಕಡೆಗಣಿಸುತ್ತಿದ್ದಳು ಹಾಗೂ ಆತನ ನಂಬರ್​ನ್ನು ಬ್ಲಾಕ್​ ಮಾಡಿದ್ದು ಈತನ ಕೋಪ ಹೆಚ್ಚಲು ಕಾರಣವಾಗಿತ್ತು ಎಂದು ಹೇಳಿದ್ದಾರೆ.

ತನಿಖೆಯ ವೇಳೆ ಆರೋಪಿ ಯುವತಿಯ ಮೇಲೆ ದ್ವೇಷ ತೀರಿಸಿಕೊಳ್ಳುವ ಸಲುವಾಗಿ ಈ ರೀತಿ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ಹೀಗಾಗಿ ಆತ ತನ್ನ ಗೆಳತಿಯ ಮನೆ ಬಳಿಗೆ ಹೋಗಿದ್ದಾನೆ. ಆದರೆ ಆಕೆ ಮನೆಯಲ್ಲಿ ಇರಲಿಲ್ಲ ಎಂಬ ವಿಚಾರ ತಿಳಿದಿದೆ.

ಆಕೆ ಸ್ನೇಹಿತರ ಮನೆಗೆ ಹೋಗಿದ್ದಾಳೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಅದೇ ಸ್ಥಳಕ್ಕೆ ಹೋದ ಸುರೇಶ್​ ಆಕೆಗೆ ಬೆದರಿಕೆ ಒಡ್ಡಿದ್ದಾನೆ.

ಘಟನೆ ಬಳಿಕ ಯುವತಿಯ ಸ್ನೇಹಿತೆ ದೂರನ್ನ ದಾಖಲಿಸಿದ್ದು, ನನ್ನ ಗೆಳತಿಯನ್ನ ಬೆದರಿಸೋಕೆ ಅಂತಾ ಆಕೆಯ ಮಾಜಿ ಗೆಳೆಯ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...