alex Certify ವೈದ್ಯರಿಗೆ ಫ್ಲೈಯಿಂಗ್ ಕಿಸ್ ನೀಡಿದ ಕೊರೊನಾ ಸೋಂಕಿತ 15 ತಿಂಗಳ ಮಗು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈದ್ಯರಿಗೆ ಫ್ಲೈಯಿಂಗ್ ಕಿಸ್ ನೀಡಿದ ಕೊರೊನಾ ಸೋಂಕಿತ 15 ತಿಂಗಳ ಮಗು

15-month-old Covid-19 positive girl shakes hand with staff in hospital

ಕೊರೊನಾ ವೈರಸ್ ಯಾರನ್ನೂ ಬಿಡ್ತಿಲ್ಲ. ಕೊರೊನಾ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರನ್ನೂ ಆವರಿಸುತ್ತಿದೆ. ದಿನ ದಿನಕ್ಕೂ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾ ಪೀಡಿತರಿಗೆ ವೈದ್ಯರ ತಂಡ ಎಚ್ಚರಿಕೆಯಿಂದ ಕೆಲಸ ಮಾಡ್ತಿದೆ. ಆದ್ರೆ ಕೊರೊನಾ ಪೀಡಿತ ಮಕ್ಕಳಿಗೆ ಚಿಕಿತ್ಸೆ ನೀಡುವುದು ಕಷ್ಟ. ಅವ್ರನ್ನು ಸಂತೋಷವಾಗಿಟ್ಟುಕೊಳ್ಳಲು ವೈದ್ಯರು ಸಾಕಷ್ಟು ಪ್ರಯತ್ನಪಡಬೇಕು.

ಈ ಮಧ್ಯೆ 15 ತಿಂಗಳ ಬಾಲಕಿ ವಿಡಿಯೋ ವೈರಲ್ ಆಗಿದೆ. ಕೊರೊನಾ ಸೋಂಕಿತ ಬಾಲಕಿ ವೈದ್ಯರಿಗೆ ಫ್ಲೈಯಿಂಗ್ ಕಿಸ್ ನೀಡಿದ್ದಾಳೆ. ಚಂಡೀಗಢದ ಪಿಜಿಐಎಂಆರ್ ಆಸ್ಪತ್ರೆಯಲ್ಲಿ 15 ತಿಂಗಳ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಈ ಘಟನೆ ಮೇ. 4 ರಂದು ರಾತ್ರಿ 11.30 ಕ್ಕೆ ನಡೆದಿದೆ ಎಂದು ವಿಡಿಯೋದಲ್ಲಿ ಬಾಲಕಿಯೊಂದಿಗೆ ಕಾಣಿಸಿಕೊಂಡ ವೈದ್ಯ ನರೇಂದ್ರ ತ್ಯಾಗಿ ತಿಳಿಸಿದ್ದಾರೆ. ಆ ದಿನ ವೈದ್ಯರು ರಾತ್ರಿ ಪಾಳಿಯಲ್ಲಿದ್ದರು. ಆ ಹುಡುಗಿಯ ತಾಯಿಯ ಧ್ವನಿಯೂ ವಿಡಿಯೋದಲ್ಲಿ ಕೇಳಿಬರುತ್ತಿದೆ. ಆಕೆ ತಾಯಿಗೆ ಕೊರೊನಾ ಸೋಂಕಿಲ್ಲವೆಂದು ವೈದ್ಯರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...