alex Certify ಕೊರೋನಾ ಕ್ವಾರಂಟೈನ್, ಲಾಕ್ಡೌನ್ ನಡುವೆ ಅನಪೇಕ್ಷಿತ ಗರ್ಭಧಾರಣೆ: ವಲಸೆ ಕಾರ್ಮಿಕರಿಗೆ ಕಾಂಡೋಮ್ ವಿತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ಕ್ವಾರಂಟೈನ್, ಲಾಕ್ಡೌನ್ ನಡುವೆ ಅನಪೇಕ್ಷಿತ ಗರ್ಭಧಾರಣೆ: ವಲಸೆ ಕಾರ್ಮಿಕರಿಗೆ ಕಾಂಡೋಮ್ ವಿತರಣೆ

ಪಾಟ್ನಾ: ಲಾಕ್ ಡೌನ್ ಜಾರಿಯಾದ ನಂತರ ಬಿಹಾರಕ್ಕೆ ವಿವಿಧ ರಾಜ್ಯಗಳಿಂದ ಸುಮಾರು 29 ಲಕ್ಷ ವಲಸೆ ಕಾರ್ಮಿಕರು ವಾಪಸಾಗಿದ್ದಾರೆ.

ಹೆಚ್ಚಿನವರು 14 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಮುಗಿಸಿ ಮನೆಗೆ ತೆರಳಿದ್ದಾರೆ. ಅಲ್ಲದೆ ಕೆಲವು ವಲಸೆ ಕಾರ್ಮಿಕರು ಮನೆಯಲ್ಲೇ ಕ್ವಾರಂಟೈನ್ ನಲ್ಲಿದ್ದಾರೆ. ಇವರೆಲ್ಲರಿಗೂ ಆರೋಗ್ಯ ಇಲಾಖೆಯಿಂದ ಕಾಡೋಮ್ ವಿತರಣೆ ಮಾಡಲಾಗುತ್ತಿದೆ.

ಅನಪೇಕ್ಷಿತ ಗರ್ಭಧಾರಣೆ ತಡೆಯುವ ಉದ್ದೇಶದಿಂದ ಬಿಹಾರ ಆರೋಗ್ಯ ಇಲಾಖೆ ಕಾಂಡೋಮ್ ನೀಡುತ್ತಿದೆ. ಜಿಲ್ಲಾ ಮಟ್ಟದಲ್ಲಿ ಸುಮಾರು 5.30 ಲಕ್ಷ ಕಾರ್ಮಿಕರು ಕ್ವಾರಂಟೈನ್ ಸೆಂಟರ್ ಗಳಲ್ಲಿ ಇದ್ದಾರೆ. ಅವರೆಲ್ಲ ಮನೆಗೆ ತೆರಳುತ್ತಿರುವುದರಿಂದ ಅನಪೇಕ್ಷಿತ ಗರ್ಭಧಾರಣೆಯ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕಾಂಡೋಮ್ ವಿತರಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೌಟುಂಬಿಕ ಯೋಜನೆಯ ಭಾಗವಾಗಿ ಕಾಂಡೋಮ್ ವಿತರಿಸಲಾಗುತ್ತಿದೆ. ಕೊರೋನಾ ಸೋಂಕಿಗೂ ಇದಕ್ಕೂ ಸಂಬಂಧವಿಲ್ಲ. ಅನಪೇಕ್ಷಿತ ಗರ್ಭಧಾರಣೆ ಲಾಕ್ ಡೌನ್ ಸಂದರ್ಭದಲ್ಲಿ ಜಾಸ್ತಿಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...