alex Certify ಹೃದಯ ಶ್ರೀಮಂತಿಕೆ ಮೆರೆದ ಬಡ ಕೂಲಿ ಕಾರ್ಮಿಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದಯ ಶ್ರೀಮಂತಿಕೆ ಮೆರೆದ ಬಡ ಕೂಲಿ ಕಾರ್ಮಿಕ

ಗಿರೀಶ್ ತೆಂಗಿನ ಮರವೇರಿ ಕಾಯಿ ಕೀಳುವ ಒಬ್ಬ ಬಡ ಕಾರ್ಮಿಕ. ಅವರ ಒಂದು ದಿನದ ದುಡಿಮೆ 100 ರೂಪಾಯಿ ಇರಬಹುದು. ಆದರೆ, ಅವರ ಮನಸ್ಸಿನಲ್ಲಿ ಬಡತನವಿಲ್ಲ. ಅವರು ಕರೋನಾ ಲಾಕ್‌ ಡೌನ್ ಅವಧಿಯಲ್ಲಿ ತಮ್ಮದೇ ಖರ್ಚಿನಲ್ಲಿ ಪೊಲೀಸರಿಗೆ ನೀರು ಮತ್ತು ತಿಂಡಿ ಹಂಚುತ್ತಿದ್ದಾರೆ.

“ತಮ್ಮ ದ್ವಿಚಕ್ರ ವಾಹನದಲ್ಲಿ ದಿನವೂ ಬರುವ ಅವರು, ಪೊಲೀಸರು ಬೇಡವೆಂದರೂ ನೀರು ಮತ್ತು ತಿಂಡಿಯನ್ನು ನೀಡಿ ಹೋಗುತ್ತಾರೆ. ನಾವು ಬಿಸಿಲಿನಲ್ಲಿ ನಿಂತು ಜನರಿಗೋಸ್ಕರ ಮಾಡುವ ಕೆಲಸವನ್ನು ಮೆಚ್ಚಿ ನಮಗೆ ಸಹಾಯ ಮಾಡಲು ಈ ಸೇವೆ ಕೊಡುತ್ತಿದ್ದಾರೆ” ಎಂದು ಎಸ್.ಐ. ಟೋಲ್ಸನ್ ಜೋಸೆಫ್ ತಿಳಿಸಿದ್ದಾರೆ.

“ನಮ್ಮ ಇಲಾಖೆ ನಮಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದರೂ ಗಿರೀಶ್ ನೀರು, ತಿಂಡಿ ಕೊಡುವುದನ್ನು ನಿಲ್ಲಿಸಿಲ್ಲ” ಎಂದು ಮಹಿಳಾ ಪೊಲೀಸ್ ಕುಂಜುಮೂಲ್ ಹೇಳಿದ್ದಾರೆ. ಗಿರೀಶ್ ರವರ ಕೆಲಸಕ್ಕೆ ಪೊಲೀಸ್ ಇಲಾಖೆ ತನ್ನ ಮೆಚ್ಚುಗೆ ವ್ಯಕ್ತಪಡಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...