alex Certify ಸಿನಿಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿ: ರಾತ್ರಿ ಥಿಯೇಟರ್ ಓಪನ್…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿನಿಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿ: ರಾತ್ರಿ ಥಿಯೇಟರ್ ಓಪನ್…?

ನವದೆಹಲಿ: ಲಾಕ್ ಡೌನ್ ನಿಂದಾಗಿ ಸ್ಥಗಿತಗೊಂಡಿದ್ದ , ಮಾಲ್, ಸಿನಿಮಾ ಥಿಯೇಟರ್ ಗಳನ್ನು ರಾತ್ರಿ ವೇಳೆ ಓಪನ್ ಮಾಡುವ ಸಾಧ್ಯತೆ ಇದೆ.

ಮಾಲ್ ಮತ್ತು ಸಿನಿಮಾ ಥಿಯೇಟರ್ ತೆರೆಯುವ ಬಗ್ಗೆ  ಕೇಂದ್ರ ಸರ್ಕಾರದಿಂದ ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ. ಬೆಳಗ್ಗೆ ಬಿಟ್ಟು ರಾತ್ರಿ ವೇಳೆ ಮಾತ್ರ ತೆರೆಯಲು ಅನುಮತಿ ನೀಡುವ ಕುರಿತು ಚರ್ಚೆ ನಡೆಸಲಾಗಿದೆ.

ಲೆಕ್ಕಾಚಾರದ ಪ್ರಕಾರ ರಾತ್ರಿಯಲ್ಲಿ ಸಂಚಾರ ದಟ್ಟಣೆ ಕಡಿಮೆ ಇರುತ್ತದೆ. ರಾತ್ರಿ ಸಂಚಾರ ದಟ್ಟಣೆ ಕಡಿಮೆ ಇರುವುದರಿಂದ ಜನರ ನಿಯಂತ್ರಣ ಸುಲಭವಾಗುತ್ತದೆ. ಉದ್ಯೋಗಿಗಳಿಗೂ ಉದ್ಯೋಗಕ್ಕೆ ತೊಂದರೆ ಆಗುವುದಿಲ್ಲ ಎಂಬ ಲೆಕ್ಕಾಚಾರವಿದೆ

ಈ ಹಿನ್ನಲೆಯಲ್ಲಿ ಮಾಲ್ ಮತ್ತು ಸಿನಿಮಾ ಹಾಲ್ ಗಳನ್ನು ಓಪನ್ ಮಾಡಲು ಚಿಂತನೆ ನಡೆಸಿದೆ. ಕಂಟೇನ್ಮೆಂಟ್ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಸಿನಿಮಾ ಹಾಲ್ ಮತ್ತು ಮಾಲ್ ಗಳನ್ನು ಷರತ್ತಿನೊಂದಿಗೆ ಓಪನ್ ಮಾಡಲು ಇರುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...