alex Certify ಎಚ್ಚರ…! ಆರೋಗ್ಯ ಇಲಾಖೆ ಹೆಸರಿನಲ್ಲಿ ರವಾನೆಯಾಗ್ತಿದೆ ಕೊರೊನಾ ಕುರಿತ ಸುಳ್ಳು ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಚ್ಚರ…! ಆರೋಗ್ಯ ಇಲಾಖೆ ಹೆಸರಿನಲ್ಲಿ ರವಾನೆಯಾಗ್ತಿದೆ ಕೊರೊನಾ ಕುರಿತ ಸುಳ್ಳು ಸುದ್ದಿ

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಈ ಮಧ್ಯೆ ಕೊರೊನಾಗೆ ಸಂಬಂಧಿಸಿದ ಕೆಲ ವದಂತಿಗಳು ಹರಡುತ್ತಿವೆ. ವಾಟ್ಸಾಪ್ ನಲ್ಲಿಯೂ ಅನೇಕ ಸಂದೇಶಗಳು ಹರಿದಾಡುತ್ತಿವೆ. ದೇಶದ ಕೆಲ ಭಾಗಗಳಲ್ಲಿ ಕೊರೊನಾದ ಹೊಸ ರೂಪಾಂತರ ಸಿಕ್ಕಿರುವ ಬಗ್ಗೆ ಸುದ್ದಿ ಹರಡಿದೆ. ಆರೋಗ್ಯ ಇಲಾಖೆಯ ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷ್ಯ ಹೇಳಲಾಗಿದೆ ಎಂದು ವಾಟ್ಸಾಪ್ ನಲ್ಲಿ ಸಂದೇಶ ಹರಿದಾಡುತ್ತಿದೆ.

ಆರೋಗ್ಯ ಇಲಾಖೆ ಪತ್ರಿಕಾಗೋಷ್ಠಿಯಲ್ಲಿ 771 ಹೊಸ ರೂಪಾಂತರ ಸಿಕ್ಕಿರುವ ಬಗ್ಗೆ ಮಾಹಿತಿ ನೀಡಲಾಗಿದೆ. ಇದ್ರಲ್ಲಿ 736 ಯುಕೆ ರೂಪಾಂತರ,‌ 34 ದಕ್ಷಿಣ ಆಫ್ರಿಕಾ ರೂಪಾಂತರ ಹಾಗೂ ಬ್ರೆಜಿಲ್ ನ ಒಂದು ರೂಪಾಂತರ ಎನ್ನಲಾಗಿದೆ. ಈ ರೂಪಾಂತರಗಳು ದೇಶದ 18 ರಾಜ್ಯಗಳಿಗೆ ಹರಡಿದೆ. ಈ ರೂಪಾಂತರ ವೇಗವಾಗಿ ಹರಡುತ್ತಿದೆ ಎಂದು ಸಂದೇಶ ರವಾನೆ ಮಾಡಲಾಗ್ತಿದೆ.

ಈ ಸಂದೇಶ ಸುಳ್ಳು. ಇದೊಂದು ವದಂತಿಯಾಗಿದ್ದು, ಇದ್ರ ಬಗ್ಗೆ ಆತಂಕ ಬೇಡ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಈ ರೀತಿಯ ಯಾವುದೇ ಪತ್ರಿಕಾ ಪ್ರಕಟಣೆಯನ್ನು ಆರೋಗ್ಯ ಇಲಾಖೆ ನೀಡಿಲ್ಲವೆಂದು ಸ್ಪಷ್ಟಪಡಿಸಿದೆ. ಪತ್ರಿಕಾ ಮಾಹಿತಿ ಬ್ಯೂರೋ ಈ ಬಗ್ಗೆ ಟ್ವಿಟ್ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...