alex Certify ಮತ್ತೆ ಚರ್ಚೆಗೆ ಬಂದ ಸೋನು ಸೂದ್, ದಾಖಲಾಯ್ತು ಕೇಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ ಚರ್ಚೆಗೆ ಬಂದ ಸೋನು ಸೂದ್, ದಾಖಲಾಯ್ತು ಕೇಸ್

Sonu Sood के खिलाफ BMC ने दर्ज कराया केस, ये है पूरा मामला

ಬಾಲಿವುಡ್ ನಟ ಸೋನು ಸೂದ್ ಲಾಕ್ ಡೌನ್ ಸಂದರ್ಭದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದರು. ಸೋನು ಸಮಾಜ ಸೇವೆ ಮೂಲಕ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಸೋನು ಈಗ ಮತ್ತೆ ಚರ್ಚೆಯಲ್ಲಿದ್ದಾರೆ. ಆದ್ರೆ ಈಗ ಸೋನು ವಿರುದ್ಧ ದೂರು ದಾಖಲಾಗಿದೆ. ಸೋನು ವಿರುದ್ಧ ಬಿಎಂಸಿ ಪೊಲೀಸರಿಗೆ ದೂರು ನೀಡಿದೆ.

ಸೋನು ಸೂದ್, ವಸತಿ ಕಟ್ಟಡವನ್ನು ಹೊಟೇಲ್ ಆಗಿ ಪರಿವರ್ತಿಸಿದ್ದಾರೆ. ಇದಕ್ಕೆ ಯಾವುದೇ ಅನುಮತಿ ಪಡೆದಿಲ್ಲವೆಂದು ಬಿಎಂಸಿ ಆರೋಪ ಮಾಡಿದೆ. ಎಬಿ ನಾಯರ್ ರಸ್ತೆಯ ಶಕ್ತಿ ಸಾಗರ್ ಕಟ್ಟಡವನ್ನು ಹೊಟೇಲ್ ಆಗಿ ಪರಿವರ್ತಿಸಿದ್ದಾರೆ. ಅದು ವಸತಿ ಕಟ್ಟಡವಾಗಿತ್ತು. ನಾಲ್ಕಂತಸ್ತಿನ ಕಟ್ಟಡವನ್ನು ಸೋನು ಹೊಟೇಲ್ ಆಗಿ ಪರಿವರ್ತಿಸಿದ್ದಾರೆ. ಇದಕ್ಕೆ ಯಾವುದೇ ಅನುಮತಿ ಪಡೆದಿಲ್ಲವೆಂದು ಬಿಎಂಸಿ ಹೇಳಿದೆ.

ಇದಕ್ಕೆ ಸೋನು ಸೂದ್ ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ ಬಿಎಂಸಿ ಅನುಮತಿ ಪಡೆದಿದ್ದೇನೆ. ಮಹಾರಾಷ್ಟ್ರ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದ ಅನುಮತಿಗಾಗಿ ಕಾಯ್ತಿದ್ದೇನೆಂದು ಸೋನು ಹೇಳಿದ್ದಾರೆ. ಬಿಎಂಸಿ ನೊಟೀಸ್ ವಿರುದ್ಧ ಸೋನು ಮುಂಬೈ ಸಿವಿಲ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅಲ್ಲಿ ಯಾವುದೇ ಮಧ್ಯಂತರ ಪರಿಹಾರ ಸಿಕ್ಕಿರಲಿಲ್ಲ. ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲು ಸೋನುಗೆ ಮೂರು ವಾರಗಳ ಕಾಲಾವಕಾಶ ನೀಡಿತ್ತು. ಆದ್ರೆ ಅವಧಿ ಮುಗಿದಿದ್ದು ಬಿಎಂಸಿ ದೂರು ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...