alex Certify ಲಡಾಖ್​​ನಲ್ಲಿ ಕೇಂದ್ರ ವಿಶ್ವ ವಿದ್ಯಾಲಯ ಸ್ಥಾಪನೆಗೆ ಅಸ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಡಾಖ್​​ನಲ್ಲಿ ಕೇಂದ್ರ ವಿಶ್ವ ವಿದ್ಯಾಲಯ ಸ್ಥಾಪನೆಗೆ ಅಸ್ತು

ಕೇಂದ್ರ ಬಜೆಟ್​ 2021ರ ಪ್ರಮುಖ ಪ್ರಕಟಣೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ದೇಶದಲ್ಲಿ 15 ಸಾವಿರ ಶಾಲೆಗಳನ್ನ ಬಲಪಡಿಸಲಾಗುವುದು ಹಾಗೂ ಎನ್​​ಜಿಓಗಳ ಸಹಭಾಗಿತ್ವದಲ್ಲಿ 100 ಹೊಸ ಸೈನಿಕ್​ ಶಾಲೆಗಳನ್ನ ಸ್ಥಾಪನೆ ಮಾಡೋದಾಗಿ ಘೋಷಣೆ ಮಾಡಿದ್ದಾರೆ .

ಕೇಂದ್ರಾಡಳಿತ ಪ್ರದೇಶಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಲಡಾಖ್​ನ ಲೇಹ್​ನಲ್ಲಿ ಕೇಂದ್ರ ವಿಶ್ವ ವಿದ್ಯಾಲಯ ಸ್ಥಾಪನೆಯಾಗಲಿದೆ ಎಂದು ನಿರ್ಮಲಾ ಸೀತಾರಾಮನ್​ ಹೇಳಿದ್ದಾರೆ.

ಇಷ್ಟು ಮಾತ್ರವಲ್ಲದೇ ಬುಡಕಟ್ಟು ಹಾಗೂ ದಲಿತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಲುಗಾಗಿ ಏಕಲವ್ಯ ಶಾಲೆಗಳಿಗೆ 38 ಕೋಟಿ ರೂಪಾಯಿಗಳನ್ನ ಮೀಸಲಿಡಲಾಗಿದೆ ಅಂತಂದ್ರು.

ಹಾಗೂ ನಿರ್ಮಲಾ ಸೀತಾರಾಮನ್​ ತಮ್ಮ ಭಾಷಣದ ವೇಳೆ ಯುವಕರಿಗೆ ಅವಕಾಶಗಳನ್ನ ಹೆಚ್ಚಿಸುವ ಸಲುವಾಗಿ ಅಪ್ರೆಂಟಿಸ್​ಶಿಪ್​ ಕಾನೂನು ತಿದ್ದುಪಡಿ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...