alex Certify ಈಕೆ ಪತಿಗೆ ವಿಚ್ಛೇದನ ನೀಡಿರುವುದರ ಹಿಂದಿನ ಕಾರಣ ಅಚ್ಚರಿಗೊಳಿಸುತ್ತೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈಕೆ ಪತಿಗೆ ವಿಚ್ಛೇದನ ನೀಡಿರುವುದರ ಹಿಂದಿನ ಕಾರಣ ಅಚ್ಚರಿಗೊಳಿಸುತ್ತೆ…!

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಅತ್ಯಪರೂಪದ ಹಾಗೂ ಅಷ್ಟೇ ಅಚ್ಚರಿಯ‌ ಘಟನೆಯೊಂದರಲ್ಲಿ, ಮಹಿಳೆಯೊಬ್ಬರು ತನ್ನ ಪತಿಗೆ ವಿಚ್ಛೇದನ ಕೊಟ್ಟಿದ್ದಾರೆ. ಇದರಲ್ಲೇನು ವಿಶೇಷ ಎಂದಿರಾ? ಅಲ್ಲೇ ಇರೋದು ನೋಡಿ ಸ್ವಾರಸ್ಯ.

ತನ್ನ ಪತಿ ಆತನ ಗರ್ಲ್‌ಫ್ರೆಂಡ್‌ ಜೊತೆಗೆ ಮದುವೆ ಮಾಡಿಕೊಳ್ಳಲಿ ಎಂದು ಈ ಮಹಿಳೆ ಖುದ್ದು ತಾನೇ ಮುಂದೆ ಬಂದು ಆತನಿಗೆ ವಿಚ್ಛೇದನ ನೀಡಿದ್ದಾರೆ. ಏಕಕಾಲದಲ್ಲಿ ಇಬ್ಬರು ಸಂಗಾತಿಗಳೊಂದಿಗೆ ವೈವಾಹಿಕ ಜೀವನ ನಡೆಸುವುದು ಕಾನೂನಾತ್ಮಕವಾಗಿ ಸಾಧ್ಯವಿಲ್ಲದೇ ಇದ್ದ ಕಾರಣ ಈ ಮಹಿಳೆ ತನ್ನ ಪತಿಗೆ ಈ ರೀತಿಯಲ್ಲಿ ಸಹಾಯ ಮಾಡಿದ್ದಾರೆ.

ತನ್ನ ಪತಿಯ ಸಂತೋಷಕ್ಕಾಗಿ ತನ್ನ ಮೂರು ವರ್ಷಗಳ ವೈವಾಹಿಕ ಜೀವನವನ್ನೇ ಕಡಿದುಕೊಂಡು ಈ ರೀತಿಯ ತ್ಯಾಗ ಮಾಡಿದ ಈ ಮಹಿಳೆ ಬಗ್ಗೆ ಕೆಲ ನೆಟ್ಟಿಗರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...