alex Certify ಕೊರೊನಾ ನಡುವೆ ರಾಜಸ್ಥಾನಕ್ಕೆ ಮತ್ತೊಂದು ಶಾಕ್​: ಹಕ್ಕಿ ಜ್ವರ – ಹೈ ಅಲರ್ಟ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ನಡುವೆ ರಾಜಸ್ಥಾನಕ್ಕೆ ಮತ್ತೊಂದು ಶಾಕ್​: ಹಕ್ಕಿ ಜ್ವರ – ಹೈ ಅಲರ್ಟ್​..!

ರಾಜಸ್ಥಾನದಲ್ಲಿ ಹಕ್ಕಿ ಜ್ವರ ಸಂಭವಿಸುತ್ತಿರುವ ಪ್ರದೇಶಗಳಿಂದ ಮಾದರಿ ಸಂಗ್ರಹಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಜ್ವರ ಲಕ್ಷಣ ಕಂಡುಬಂದವರನ್ನ ಗುರುತಿಸುವ ಪ್ರಕ್ರಿಯೆಯೂ ರಾಜ್ಯದಲ್ಲಿ ಆರಂಭವಾಗಿದೆ.

ರಾಜಸ್ಥಾನದ ಜವಹರಲಾಲ್​ ನಗರದಿಂದ 5 ಕಿಲೋಮೀಟರ್​ ವ್ಯಾಪ್ತಿಯಲ್ಲಿ ಶೀತ, ಕೆಮ್ಮು ಹಾಗೂ ಜ್ವರ ಇರುವವರನ್ನ ಪತ್ತೆ ಹಚ್ಚಲು ಏಜನ್ಸಿಗಳನ್ನ ಸ್ಥಾಪನೆ ಮಾಡಲಾಗಿದೆ. ಈ ಮಧ್ಯೆ ಜವಹಾರ ಲಾಲ್​ ನಗರದಲ್ಲಿ ಸತ್ತ ಕಾಗೆಗಳಲ್ಲಿ ಭೀಕರ ವೈರಸ್ ಇರೋದು ಪತ್ತೆಯಾದ ಬಳಿಕ ರಾಜಸ್ಥಾನದಲ್ಲಿ ಹಕ್ಕಿ ಜ್ವರದ ಎಚ್ಚರಿಕೆಯನ್ನ ನೀಡಲಾಗಿದೆ.

ಪಶುಸಂಗೋಪನಾ ಇಲಾಖೆಯು ರಾಜ್ಯಮಟ್ಟದ ನಿಯಂತ್ರಣ ಕೊಠಡಿಗಳನ್ನ ಸ್ಥಾಪನೆ ಮಾಡಿದೆ. ರಾಜ್ಯದಲ್ಲಿ 252ಕ್ಕೂ ಹೆಚ್ಚು ಪಕ್ಷಿಗಳು ಭೀಕರ ವೈರಸ್​ನಿಂದ ಸಾವನ್ನಪ್ಪಿವೆ ಎನ್ನಲಾಗಿದೆ. ಹಕ್ಕಿ ಜ್ವರದಿಂದ ಸಾವಿಗೀಡಾದ ಹಕ್ಕಿಗಳಲ್ಲಿ ಕಾಗೆಗಳ ಸಾವು ಹೆಚ್ಚಾಗಿದೆ. ಅದರಲ್ಲೂ ಕೋಟಾ ಹಾಗೂ ಜೋದ್​ಪುರದಲ್ಲಿ ಅತಿ ಹೆಚ್ಚು ಸಾವು ವರದಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...