alex Certify ʼಬಿಗ್ ​ಬಾಸ್ʼ ಮ್ಯಾನೇಜರ್‌ ಅಪಘಾತದಲ್ಲಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬಿಗ್ ​ಬಾಸ್ʼ ಮ್ಯಾನೇಜರ್‌ ಅಪಘಾತದಲ್ಲಿ ಸಾವು

ಬಾಲಿವುಡ್​ ನಟ ಸಲ್ಮಾನ್​ ಖಾನ್​ ನಡೆಸಿಕೊಡುವ ಬಿಗ್​ ಬಾಸ್​​ 14ನೇ ಆವೃತ್ತಿಯ ಮ್ಯಾನೇಜರ್​ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. 24 ವರ್ಷದ ಪಿಸ್ತಾ ಧಾಕಡ್​ ಶುಕ್ರವಾರ ಸಂಜೆ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ.

ಬಿಗ್​ ಬಾಸ್​ 14ರ ವೀಕೆಂಡ್​ ಶೋ ಮುಗಿಸಿ ಪಿಸ್ತಾ ವಾಪಸ್ಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಬೈಕ್​ನಲ್ಲಿ ಆಕೆ ತನ್ನ ಸಹಾಯಕಿ ಜೊತೆ ಹೋಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ವೀಕೆಂಡ್​ ಶೂಟಿಂಗ್​ ಮುಗಿಸಿದ್ದ ಬಿಗ್​ ಬಾಸ್​ ತಂಡ ಪ್ಯಾಕಪ್​ ಮಾಡಿ ಹೊರಡಲು ತಯಾರಾಗಿತ್ತು. ಈ ವೇಳೆ ಪಿಸ್ತಾ ತನ್ನ ಸಹಾಯಕಿ ಜೊತೆ ಆಕ್ಟಿವಾದಲ್ಲಿ ಶೂಟಿಂಗ್​ ಸ್ಥಳದಿಂದ ಹೊರಟಿದ್ದಾರೆ. ಕತ್ತಲಾಗಿದ್ದರಿಂದ ರಸ್ತೆಯಲ್ಲಿರುವ ಹೊಂಡ ಕಾಣದ ಹಿನ್ನೆಲೆ ಗಾಡಿ ಆಯತಪ್ಪಿ ಬಿದ್ದಿದೆ. ಅಪಘಾತದಲ್ಲಿ ಪಿಸ್ತಾ ಸಹೋದ್ಯೋಗಿ ಬಲಗಡೆ ಬಿದ್ದರೆ ಪಿಸ್ತಾ ಎಡಗಡೆ ಬಿದ್ದಿದ್ದಾರೆ. ಅದೇ ವೇಳೆ ಬಂದ ವ್ಯಾನಿಟಿ ವ್ಯಾನ್​ ಆಕೆಯ ಮೈ ಮೇಲೆ ಹರಿದಿದೆ.

ಬಿಗ್​ ಬಾಸ್​ ಮಾತ್ರವಲ್ಲದೇ ಖತರೋ ಕಿ ಕಿಲಾಡಿ, ದ ವೈಸ್​ ಸೇರಿದಂತೆ ಸಾಕಷ್ಟು ಜನಪ್ರಿಯ ಶೋಗಳಲ್ಲಿ ಪಿಸ್ತಾ ಕೆಲಸ ಮಾಡಿದ್ದಾರೆ. ಪಿಸ್ತಾ ನಿಧನಕ್ಕೆ ಸಂತಾಪ ಸೂಚಿಸಿ ಅನೇಕ ಸೆಲೆಬ್ರಿಟಿಗಳು, ಬಿಗ್​ ಬಾಸ್​ ಮಾಜಿ ಸ್ಪರ್ಧೆಗಳು ಸೋಶಿಯಲ್​ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...